ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಬಳೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಕಿನ್ನಿಗೋಳಿ ರಿಕ್ಷಾ ಚಾಲಕರ - ಮಾಲಕರ ಸಂಘ
ಕಿನ್ನಿಗೋಳಿ: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಬಳೆಯನ್ನು ಕಿನ್ನಿಗೋಳಿಯ ರಿಕ್ಷಾ - ಚಾಲಕರ - ಮಾಲಕರ ಸಂಘದ ಸದಸ್ಯರು ಪ್ರಾಮಾಣಿಕವಾಗಿ ಮಹಿಳೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.ಐಕಳ ನಿವಾಸಿಯಾದ ತ್ರಿವೇಣಿ ಎಂಬುವರು ತನ್ನ 10 ಗ್ರಾಂ ಚಿನ್ನದ ಬಳೆಯನ್ನು (1ಲಕ್ಷ .40 ಸಾವಿರ ಮೌಲ್ಯ) ಕಿನ್ನಿಗೋಳಿಯ ಚರ್ಚ್ ಬಳಿಯಲ್ಲಿ ಕಳೆದುಕೊಂಡಿದ್ದು, ಈ ಚಿನ್ನದ ಬಳೆಯು ಕಿನ್ನಿಗೋಳಿ ರಿಕ್ಷಾ ಚಾಲಕ- ಮಾಲಕರ ಸಂಘದ ಸದಸ್ಯ ಬಲವಿನಗುಡ್ಡೆಯ ಸುಧಾಕರ ಎಂಬುವವರಿಗೆ ಸಿಕ್ಕಿದೆ.
ಸಂಘದ ಕಚೇರಿಯಾದ ಯುಗಪುರುಷದಲ್ಲಿ ಐಕಳ ನಿವಾಸಿ ತ್ರಿವೇಣಿಯವರಿಗೆ ರಿಕ್ಷಾ ಚಾಲಕರ - ಮಾಲಕರ ಸಂಘವು ಚಿನ್ನದ ಬಳೆಯನ್ನು ಹಸ್ತಾಂತರಿಸಿದೆ.
ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಅಧ್ಯಕ್ಷ ದಾವುದ್ ಕಲ್ಕರೆ ಎಳತ್ತೂರು ಸದಸ್ಯರಾದ ಶಶಿಕಾಂತ ರಾವ್ ಎಳತ್ತೂರು , ಉಮೇಶ್ ಶಾಂತಿಪಲ್ಕೆ, ಗಿರಿಯಪ್ಪ ಮುಚ್ಚೂರು , ಸಂದೇಶ್ ಉಲ್ಲಂಜೆ , ಇಲ್ಯಾಸ್, ಹಮೀದ್, ಶರತ್ ಸುನಿಲ್ ಉಲ್ಲಂಜೆ ಸಂತೋಷ್ ಗುತ್ತಕಾಡು ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು.