Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಯುವ ನಾಯಕ ,ಉದ್ಯಮಿ ಪ್ರತಿಕ್ ಶೆಟ್ಟಿ ಎಕ್ಕಾರು ನಿಧನ

ಕಿನ್ನಿಗೋಳಿ :ಕಿನ್ನಿಗೋಳಿ ಸಮೀಪದ ಉಳೆಪಾಡಿ ನಿವಾಸಿ ಪ್ರತೀಕ್ ಶೆಟ್ಟಿ ಎಕ್ಕಾರು(41) ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾದರು 
ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ 
ಪ್ರತೀಕ್ ಶೆಟ್ಟಿ ಎಕ್ಕಾರು ರವರು ಬಾಲ್ಯದಿಂದಲೇ ಬಿಜೆಪಿ ಪಕ್ಷದ ಮೂಲಕ ಯುವಕರ ಸಂಘಟನೆಯಲ್ಲಿ ತೊಡಗಿಸಿಕೊಂಡು ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು 
ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಕಿನ್ನಿಗೋಳಿ ಮುಲ್ಕಿ ಪರಿಸರದಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಅಸಹಾಯಕರಿಗೆ ಸಹಾಯ ಹಸ್ತದ ಮೂಲಕ  ಜನಾನುರಾಗಿಯಾಗಿದ್ದರು
ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್,ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು,ಭುವನಾಭಿರಾಮ ಉಡುಪ,ಕಿನ್ನಿಗೋಳಿ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್,ಮುಲ್ಕಿi ನಗರ ಪಂಚಾಯತ್ ಮಾಜೀ ಅಧ್ಯಕ್ಷ ಸತೀಶ್ ಅಂಚನ್, ಸುಭಾಷ್ ಶೆಟ್ಟಿ, ಮಾಜೀ ಸದಸ್ಯ ಹರ್ಷರಾಜ ಶೆಟ್ಟಿ
ಸತೀಶ್ ಶೆಟ್ಟಿ ಪೇಟೆ ಮನೆ, ಭಾನುಮತಿ ಶೆಟ್ಟಿ ಕಕ್ವಗುತ್ತು, ಡಾ. ಹರೀಶ್ಚಂದ್ರ ಪಿ ಸಾಲ್ಯಾನ್,
ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ನಿರ್ದೇಶಕ ದೇವಪ್ರಸಾದ್ ಕೆಂಪುಗುಡ್ಡೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ,ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು,ಬಿರುವೆರ್ ಕುಡ್ಲ ಮುಲ್ಕಿ ಘಟಕದ ಗೌರವಾಧ್ಯಕ್ಷ ಕಿಶೋರ್ ಸಾಲ್ಯಾನ್,ಜೀವನ್ ಶೆಟ್ಟಿ ಅಂಗರಗುಡ್ಡೆ, ಸುಧೀರ್ ಶೆಟ್ಟಿ ಶಿಮಂತೂರು, ಮಂಜುನಾಥ ಶೆಟ್ಟಿ, ಮನೋಜ್ ಕಡವಿನ ಬಾಗಿಲು, ಶರತ್ ಕಾರ್ನಾಡ್, ಉದಯಕುಮಾರ್ ಶೆಟ್ಟಿ ಅಧಿಧನ್ , ಕಿಶೋರ್ ಶೆಟ್ಟಿ ಬಪ್ಪನಾಡು,ಸುರೇಶ್ ಶೆಟ್ಟಿ ಶಿಮಂತೂರು, ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ