Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರಧಾನಿ ನರೇಂದ್ರ ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ, ಮಹಿಳಾ ಮೋರ್ಚಾ ಮೂಲ್ಕಿ - ಮೂಡಬಿದ್ರಿಯ ಮಂಡಲ ವತಿಯಿಂದ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

ಕಿನ್ನಿಗೋಳಿ :ಪ್ರಧಾನಿ  ನರೇಂದ್ರ ಮೋದಿಜಿಯವರ ಹುಟ್ಟುಹಬ್ಬದ  ಪ್ರಯುಕ್ತ, ಬಿಜೆಪಿ ಮಹಿಳಾ ಮೋರ್ಚಾ ಮೂಲ್ಕಿ - ಮೂಡಬಿದ್ರಿಯ ಮಂಡಲ ವತಿಯಿಂದ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವು ಸೋಮವಾರದಂದು  ರಾಜರತ್ನಪುರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಗೀತಾ ಲಕ್ಷ್ಮಿ,  ಭುವನಾಬಿರಾಮ ಉಡುಪ, ಗುರುರಾಜ್ ಮಲ್ಲಿಗೆಯಂಗಡಿ, ಶ್ರೀಮತಿ ಸರೋಜಿನಿ ಗುಜರಾನ್,  ಕೇಶವ್ ಕರ್ಕೇರ, ಶ್ರೀಮತಿ ಪದ್ಮಲತಾ ರಾವ್, ಶ್ರೀಮತಿ ಮೀರಾ ಶೆಟ್ಟಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.