ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿಚಿನ್ನ ಮತ್ತು ಬೆಳ್ಳಿ ಪದಕ,ಅದ್ದೂರಿ ಸ್ವಾಗತ
ಕಿನ್ನಿಗೋಳಿ:ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಮತ್ತು ಬೆಳ್ಳಿ ಪದಕದೊಂದಿದೆ ಮೂವರು ಪದಕ ಪಡೆದಿರುತ್ತಾರೆ. ಜೂನಿಯರ್ ವಿಭಾಗದಲ್ಲಿ
ಜಯಲಕ್ಷೀ ಆಚಾರ್ಯ ಚಿನ್ನದ ಪದಕ, ಸಾತ್ವಿ ಪಿ ಸಾಲಿಯಾನ್ ಬೆಳ್ಳಿ ಪದಕ ಪಡೆದಿದ್ದಾರೆ.ಇವರು ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಈಶ್ವರ್ ಕಟೀಲ್ ಮತ್ತು ಕೇಶವ ಕರ್ಕೇರ ಅವರಿಂದ ತರಬೇತಿ ಪಡೆದಿರುತ್ತಾರೆ. ಮತ್ತೋರ್ವ ಕೀರ್ತನ್ ಕಟೀಲ್ ಕೂಡ ಬೆಳ್ಳಿಪದಕ ಪಡೆದಿದ್ದು ಎ.ಎಸ್.ಪಿ.ಎ ಯಲ್ಲಿ ತರಬೇತಿ ಪಡೆದಿರುತ್ತಾರೆ.ವಿಜೇತರಾದ ಮೂವರೂ ತಾಯ್ನಾಡಿಗೆ ಮರಳಿದ್ದು ಮಂಗಳೂರು ವಿಮಾನನಿಲ್ದಾಣದಲ್ಲಿ ವಿಜೇತರನ್ನು ಸ್ವಾಗತಿಸಲಾಯಿತು. ನಂತರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಭಾರತದಿಂದ ಒಟ್ಟು 20 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು ಕರ್ನಾಟಕದಿಂದ 7 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದಾರೆ
ಈ ಸಂದರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಪ್ರಭಾಕರ ಶೆಟ್ಟಿ ಕೋಂಜಾಲಗುತ್ತು, ಅನೀಲ್ ಶೆಟ್ಟಿ ಕೋಂಜಾಲಗುತ್ತು, ದಿವಾಕರ ಶೆಟ್ಟಿ ಕೊಂಜಾಲಗುತ್ತು,
ಪ್ರವೀಣ್ ಸಾಲಿಯಾನ್, ಅಭಿಲಾಷ್ ಶೆಟ್ಟಿ ಕಟೀಲು, ದಾಮೋದರ ಶೆಟ್ಟಿ, ಸತೀಶ್ ಶೆಟ್ಟಿ ಎಕ್ಕಾರು, ಸಿಂತಿಯಾ ಕುಟಿನ್ಹೊ, ಚಂದ್ರಹಾಸ್, ಲೋಕಯ್ಯ ಸಾಲ್ಯಾನ್ ಕೊಂಡೇಲ, ಸಾರ್ವಜನಿಕರು ಅಭಿಮಾನಿಗಳು ಉಪಸ್ಥಿತರಿದ್ದರು.