Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಾಳೆ ಕೃತಿಗಳ ಬಿಡುಗಡೆ, ಶ್ರೀನಿಧಿ ಜೊತೆ ಸಂವಾದ


ಕಿನ್ನಿಗೋಳಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ಸಂಯೋಜನೆಯಲ್ಲಿ ಐತಿಹಾಸಿಕ ಕೊಡೆತ್ತೂರು ಗುತ್ತಿನ ಮನೆಯಲ್ಲಿ ತಾ. ೮ರ ಭಾನುವಾರ ಸಂಜೆ ಗಂಟೆ ೪ಕ್ಕೆ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಧರ ಡಿ.ಎಸ್ ಅವರ ಕಾದಂಬರಿ ಗಾಂಡೀವಿ ಹಾಗೂ ದಾಮೋದರ ಶೆಟ್ಟಿ ಇರುವೈಲು ಅವರ ಲೇಖನಗಳ ಸಂಗ್ರಹ ಮರೆತ ಅಪರಂಜಿಗಳು ಕೃತಿಗಳನ್ನು ಸುರತ್ಕಲ್‌ನ ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ಹಾಗೂ ಪುರುಷೋತ್ತಮ ಕೋಟ್ಯಾನ್ ಬಿಡುಗಡೆಗೊಳಿಸಲಿದ್ದಾರೆ.  ರವೀಂದ್ರ ಅತ್ತೂರು ಕೃತಿಗಳ ಕುರಿತು ಮಾತನಾಡಲಿದ್ದಾರೆ. 
ಸಂವಾದ 
ಇದೇ ಸಂದರ್ಭ ಇಪ್ಪತ್ತಕ್ಕೂ ಹೆಚ್ಚು ಟಿವಿ ಧಾರಾವಾಹಿಗಳ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾಗಳ ಬರಹಗಾರ, ಧಾರಾವಾಹಿ ನಿರ್ಮಾಪಕ ಶ್ರೀನಿಧಿ ಡಿ.ಎಸ್. ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.