Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ ಪ.ಪಂ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಮ್ಯಾರಥನ್ ವಾಕ್ ಕಾರ್ಯಕ್ರಮ,ಪೂರ್ವಭಾವಿ ಸಭೆ

ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಅಕ್ಟೋಬರ್ 2 ರ ಗಾಂಧಿ ಜಯಂತಿ ದಿನಾಚರಣೆಯಂದು ಮ್ಯಾರಥನ್ ವಾಕ್ ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು,ಈ ಬಗ್ಗೆ  ಸೆ.25 ರಂದು ಅಪರಾಹ್ನ 3 ಕ್ಕೆ  ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು  ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್  ವ್ಯಾಪ್ತಿಯಲ್ಲಿ ಬರುವ ಎಲ್ಲಾ ಊರಿನ   ಸಂಘ ಸಂಸ್ಥೆಗಳ ಹಾಗೂ ಶಿಕ್ಷಣ ಸಂಸ್ಥೆಗಳ, ಊರಿನ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಸದರಿ ಸಭೆಗೆ ಸಂಘದ ಪ್ರತಿನಿಧಿಗಳು ಹಾಜರಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ ಪಂಚಾಯತ್ ಪ್ರಕಟನೆ ತಿಳಿಸಿದೆ.