Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೆಸರುಗದ್ದೆ ಕ್ರೀಡೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ಸುರಗಿರಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ವತಿಯಿಂದ ಆಕ್ಟೋಬರ್ 4  ರಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದ ಗದ್ದೆಯಲ್ಲಿ ನಡೆಯಲಿರುವ ಕೆಸರುಗದ್ದೆ ಕ್ರೀಡೋತ್ಸವದ ಅಮಂತ್ರಣ ಪತ್ರಿಕೆಯನ್ನು  ಸುರಗಿರಿ ದೇವಳದ ಅರ್ಚಕ ವಿಶ್ವೇಶ್ವರ ಭಟ್ ಅವರು ದೇವಳದಲ್ಲಿ  ಬಿಡುಗಡೆಗೊಳಿಸಿದರು.
 ಈ ಸಂದರ್ಭ ಸಂಸ್ಥೆಯ ಗೌರವಾಧ್ಯಕ್ಷರಾದ  ಜಗನ್ನಾಥ ಶೆಟ್ತಿ ಮಮ್ಮೆಟ್ಟು, ಸುನೀಲ್ ಭಂಡಾರಿ ಕೆಮ್ರಾಲ್,  ಸಚಿನ್ ಶೆಟ್ಟಿ ಮೇಗಿನಬಾಳಿಕೆ, ಪ್ರಕಾಶ್ ಶೆಟ್ಟಿ ಸುರಗಿರಿ,  ಯುವಕ ಮಂಡಲದ ಅಧ್ಯಕ್ಷ ಅಭಿಷೇಕ್ ಶೆಟ್ಟಿ ಅಮಣಬೆಟ್ಟು,  ಮಹಿಳಾ ಮಂಡಲದ ಅಧ್ಯಕ್ಷೆ ಅಮಿತಾ ಶೆಟ್ಟಿ, ಮಹಾಬಲ ಶೆಟ್ಟಿ ಪಡುಮನೆ,   ಜನಾರ್ಧನ ಕಿಲೆಂಜೂರು, ಕೃಷ್ಣರಾಜ ಭಟ್,  ಧೀರಜ್ ಶೆಟ್ಟಿ ಮಮ್ಮೆಟ್ಟು,  ಸುದರ್ಶನ್ ಮೊಗಪಾಡಿ, ವಿಜಯ ಎಲ್ ಕೋಟ್ಯಾನ್, ಅರುಣ್ ಶೆಟ್ಟಿ, ನೀಲಾಧರ ಶೆಟ್ಟಿ ಹೊಸಮನೆ,  ಹರಿಶ್ಚಂದ್ರ  ಶೆಟ್ಟಿ ಪಡುಮನೆ, ಜಗ್ಗು ಬಿ ಶೆಟ್ಟಿ, ಶಿವರಾಮ ಶೆಟ್ಟಿ, ಗೀತಾ ಬಿ ಅಳ್ವ, ನಿರ್ಮಲಾ ವಿ ನಾಯಕ್, ಪ್ರಮೀಳಾ ಶೆಟ್ಟಿ ಯುವಕ ಮಂಡಲ ಯುವತಿ ಮಂಡಲದ ಸದಸ್ಯರು ಉಪಸ್ಥಿತರಿದ್ದರು.