Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರೋಟರಿ ಕ್ಲಬ್ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಕಿನ್ನಿಗೋಳಿ:ರೋಟರಿ ಕ್ಲಬ್ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಕಿನ್ನಿಗೋಳಿ ರೋಟರಿ ಭವನದಲ್ಲಿ ಸೋಮವಾರ
ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ನಡೆಯಿತು. 
ಕಾರ್ಯಕ್ರಮದಲ್ಲಿ ಕಟೀಲು ಶಿಕ್ಷಣ ಸಂಸ್ಥೆಯ ನಿವೃತ್ತ ಉಪನ್ಯಾಸಕಿ   ರೋಹಿಣಿ ಶೆಟ್ಟಿ, ಕಿನ್ನಿಗೋಳಿ ರೋಟರಿ ಶಾಲೆಯ ಸಹ ಶಿಕ್ಷಕಿ  ರೇಷ್ಮ ಸಂತೋಷ್ ಅವರನ್ನು ಸನ್ಮಾನಿಸಲಾಯಿತು.
 ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಪ್ರವೀಣ್ ಸಾಲಿಯಾನ್ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 

ಈ ಸಂದರ್ಭ ಬೆಳ್ಮಣ್  ಸರಕಾರಿ ಪದವಿ ಪೂರ್ವ ಕಾಲೇಜಿನ  ಪ್ರಾಂಶುಪಾಲ ಡಾ। ವಿನ್ಸೆಂಟ್ ವಿನೋದ್ ಡಿಸೋಜಾ, ವಲಯ ಒಂದರ ಸಹಾಯಕ ಗವರ್ನರ್, ಜೋಯಲ್ ಹೆರಾಲ್ಡ್, 
ವಲಯ ಒಂದರ  ವಲಯ ಸೇನಾನಿ, ರೊ| ದೇವಿದಾಸ್ ಶೆಟ್ಟಿ,ಸಂಸ್ಥೆಯ ಕಾರ್ಯದರ್ಶಿ ಸದಾಶಿವ ನಾಯ್ ವೃತ್ತಿ ಸೇವಾ ನಿರ್ದೇಶಕ ಜೆರಾಲ್ಡ್ ಮಿನೆಂಜಸ್ ಮತ್ತಿತರರು ಉಪಸ್ಥಿತರಿದ್ದರು.
ಪೂರ್ಣಿಮ ಶೆಟ್ಟಿ, ರೇಣುಕಾ ಶೆಟ್ಟಿ ಸನ್ಮಾನ‌ಪತ್ರ ವಾಚಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ‌ ನಿರೂಪಿಸಿದರು.