Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ ಅಲಯನ್ಸ್ ಕ್ಲಬ್ ವತಿಯಿಂದ ಕುಟುಂಬಕ್ಕೆ ಆರ್ಥಿಕ ಸಹಾಯ

ಕಿನ್ನಿಗೋಳಿ:ಸಂಘ ಸಂಸ್ಥೆಗಳು ಅರ್ಥಿಕ ಸಮಸ್ಯೆಯಿಂದ ಬಳಲುವವರಿಗೆ ಸಹಕಾರ ನೀಡಿ  ಮಾದರಿಯಾಗಬೇಕು ಎಂದು ಉದ್ಯಮಿ ಧನಂಜಯ ಶೆಟ್ಟಿಗಾರ್ ದುಬೈ ಹೇಳಿದರು. ಅವರು  ವಾಲಿಬಾಲ್ ಆಟದ  ಸಂದರ್ಭ ಇತ್ತಿಚೀಗೆ ನಿಧನರಾದ ಸೂರಿಂಜೆ ಬೋಳ್ಳಾರು ನಿವಾಸಿ ನಿಖಿತ್ ನ  ಹೆತ್ತವರಾದ ಮಾಧವ ಮತ್ತು ಶೀಲ ದಂಪತಿಗಳಿಗೆ ಅಲಯನ್ಸ್ ಕ್ಲಬ್ ಕಿನ್ನಿಗೋಳಿ ವತಿಯಿಂದ 25000 ನಗದು ಹಣ ಹಸ್ತಾಂತರಿಸಿ ಮಾತನಾಡಿದರು.
ಈ ಸಂದರ್ಭ ಅಲೆಯನ್ಸ್ ಕ್ಲಬ್ ಕಿನ್ನಿಗೋಳಿ ಅಧ್ಯಕ್ಷ ಸಂತೋಷ್ ಆಚಾರ್ಯ, ಕಾರ್ಯದರ್ಶಿ ಸುಮಿತ್, ಕೋಶಾಧಿಕಾರಿ ಅಂಬಿಕಾ,  ಧನಂಜಯ ಶೆಟ್ಟಿಗಾರ್,  ಡ್ವಾಲ್ಪಿ ಸಂತುಮಯರ್, ಸ್ಯಾನಿ ಪಿಂಟೋ, ಲ್ಯಾನ್ಸಿ ಕ್ರಾಸ್ತಾ, ದಿನೇಶ್ ಆಚಾರ್ಯ,  ಶೈಲಾ ಸಿಕ್ವೇರಾ, ಸುರೇಶ್ ಪದ್ಮನೂರು, ಪ್ರಣಿಕ್ ಕಿನ್ನಿಗೋಳಿ, ಧನ್ ರಾಜ್ ಬಟ್ಟಕೋಡಿ ಮತ್ತಿತರರು ಉಪಸ್ಥಿತರಿದ್ದರು.