Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸೆ.6:ಶಿವಪ್ರಣಾಮ್ ನೃತ್ಯ ಶಾಲೆ ಕಿನ್ನಿಗೋಳಿಯ 12ನೇ ವರ್ಷದ ಸಂಭ್ರಮ: 'ಶಿವಾಂಜಲಿ 2026'



ಕಿನ್ನಿಗೋಳಿ: ನಗರದ ಶಿವಪ್ರಣಮ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯು ತನ್ನ 12 ವರ್ಷಗಳ ಕಲಾ ಪಯಣದ ನೆನಪಿಗಾಗಿ 'ಶಿವಾಂಜಲಿ 2026' ಎಂಬ ಭರತನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೆಪ್ಟೆಂಬರ್ 6, ರವಿವಾರದಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಆಯೋಜಿಸಿದೆ. ಕಾರ್ಯಕ್ರಮವು ಸಂಜೆ 4:30ಕ್ಕೆ ಪ್ರಾರಂಭವಾಗಲಿದೆ.
ಮಂಗಳೂರಿನ ಕೊಟ್ಟಾರದ ಭಾರತಾಂಜಲಿ (ರಿ) ಸಂಸ್ಥೆಯ ಪ್ರಸಿದ್ಧ ನೃತ್ಯ ಗುರುಗಳಾದ ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಹಾಗೂ ಗುರು  ಶ್ರೀಧರ ಹೊಳ್ಳ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಿನ್ನಿಗೋಳಿಯ ಯುಗಪುರುಷ ಸಂಸ್ಥೆಯ ಭುವನಾಭಿರಾಮ ಉಡುಪ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಗೀತ ಬಳಗ:
 ನಟ್ಟುವಂಗ: ಶ್ರೀಮತಿ ಅನ್ನಪೂರ್ಣ ರಿತೇಶ್
 ಗಾಯನ: ವಿದ್ವಾನ್ ಸ್ವರಾಗ್, ಮಾಹೆ ಮತ್ತು ಶ್ರೀಮತಿ ವಂದನಾ ರಾಣಿ (ಬೆಂಗಳೂರು)
 ಮೃದಂಗ: ವಿದ್ವಾನ್ ಸುರೇಶ್ ಬಾಬು (ಕಣ್ಣೂರು)
 ಪಿಟೀಲು: ವಿದುಷಿ ಶರ್ಮಿಳಾ ರಾವ್ (ಉಡುಪಿ)
 ಕೊಳಲು: ವಿದ್ವಾನ್ ಕೆ. ಮುರಳಿಧರ (ಉಡುಪಿ)
ಯುಗಪುರುಷ ಕಿನ್ನಿಗೋಳಿ ಸಹಯೋಗದೊಂದಿಗೆ ನಡೆಯುಲಿದೆ.