Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಆ.2:ಕಿನ್ನಿಗೋಳಿ ಪಟ್ಟಣ ಪಂಚಾಯತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ "ನಮ್ಮ‌ನಡಿಗೆ ಸ್ವಚ್ಚತೆಯ ಕಡೆಗೆ" ಬ್ರಹತ್ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ "ನಮ್ಮ‌ನಡಿಗೆ ಸ್ವಚ್ಚತೆಯ ಕಡೆಗೆ" ಬ್ರಹತ್ ಸ್ವಚ್ಚತಾ ಕಾರ್ಯಕ್ರಮ ಅಕ್ಟೋಬರ್ 2 ರಂದು ಬೆಳಿಗ್ಗೆ 8.00 ಗಂಟೆಯಿಂದ ಕಿನ್ನಿಗೋಳಿ ಮುಖ್ಯರಸ್ತೆಯ ವಸಂತ ಮಂಟಪದಿಂದ ಕಟೀಲು ದೇವಸ್ಥಾನದವರೆಗೆ ನಡೆಯಲಿದೆ. ವಿಧಾನ‌ಪರಿಷತ್ ನ  ಸದಸ್ಯ  ಕಿಶೋರ್‌ಕುಮಾರ್ ಮತ್ತು ಕರ್ನಾಟಕ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸ್ವಚ್ಚತೆಯ ನಂತರ ಕಟೀಲು ದೇವಳದ ರಥಬೀದಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪದಲ್ಲಿ ಕಟೀಲು ದೇವಳದ ಆಸ್ರಣ್ಣ ಸಹೋದರರು ಭಾಗವಹಿಸಲಿದ್ದಾರೆ.
 ಕಾರ್ಯಕ್ರಮದಲ್ಲಿ ಸುಮಾರು 30 ಕ್ಕೂ ಅಧಿಕ ಸಂಘ ಸಂಸ್ಥೆಗಳ ಸುಮಾರು 500 ಸದಸ್ಯರು ಭಾಗವಹಿಸಲಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆ ಮತ್ತು ಪ್ಲಾಸ್ಟಿಕ್ ನಿಷೇಧ ಮಾಡುವ ಉದ್ದೇಶದಿಂದ ಈ  ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿದೆ ದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ತಿಳಿಸಿದ್ದಾರೆ.