Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ,ಧಾರ್ಮಿಕ ಸಭೆ

ಕಿನ್ನಿಗೋಳಿ  :  ಶ್ರೀ ರಾಘವೇಂದ್ರ ಸ್ವಾಮೀಜಿಗಳು ಒರ್ವ ಯುಗಪುರುಷ ಅವರು ಧಾರ್ಮಿಕತಯೆ ಜೆತೆಗೆ ಸಮಾಜದ ಅಭಿವೃದ್ಧಿ ಹರಿಕಾರರಾಗಿದ್ದರು. ಅವರ ನೆನಪು ಆರಾಧನೆ ಮಾಡುವುದು ಒಂದು ಯಜ್ಞದಂತೆ ಅದರ ಫಲ ಸಮಾಜಕ್ಕೆ ದೊರೆಯಬೇಕು  ಎಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ  ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ  ಮೋಹನ್‌ದಾಸ್‌ ಸುರತ್ಕಲ್‌  ಹೇಳಿದರು. ಅವರು ಆ.30 ರಂದು ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ  ಸ್ವಾಮಿಗಳ ಆರಾಧನಾ ಮಹೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ  ಉಪನ್ಯಾಸ ನೀಡಿ ಮಾತಾನಡಿದರು. ಕಸಾಪದ ಮಾಜಿ ರಾಜ್ಯಧ್ಯಕ್ಷ  ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಅಧ್ಯಕ್ಷತೆವಹಿಸಿ ಮಾತನಾಡಿ ಮಂತ್ರಾಲಯದ  ಗುರುಗಳ  ಕಾರಣಿಕರ ಪುರುಷರು ಸಮಾಜಕ್ಕೆ ಸಾಕಷ್ಟುಸೇವೆ ಅವರಿಂದ ಸಂದಿದೆ ಪ್ರತಿನಿತ್ಯ ಅವರ ಅರಾಧನೆ ಮಾಡಬೇಕಾಗಿದೆ ಎಂದರು. ಡಾ| ನಯನಾಭಿರಾಮ ಉಡುಪ  , ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ,  ಆಳ್ವಾಸ್‌ ಕಾಲೇಜಿ  ಉಪನ್ಯಾಸಕ ಪು. ಗುರುಪ್ರಸಾದ್‌ ಭಟ್‌ ಮತ್ತಿತರರು ಉಪಿಸ್ಥಿತರಿದ್ದರು.
ಯುಗಪುರುಷದ ಭುವನಾಭಿರಾಮ ಉಡುಪ ಸ್ವಾಗತಿಸಿದರು. ಬಳಿಕ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದ ಅಂಗವಾಗಿ ಪಲ್ಲಕಿ ಉತ್ಸವ , ರಥೋತ್ಸವ ನಡೆಯಿತು.