ಪದ್ಮನೂರಿನಲ್ಲಿ 18ನೇ ಸಾರ್ವಜನಿಕ ಈದ್ ಮಿಲಾದ್ ಆಚರಣೆ
ಕಿನ್ನಿಗೋಳಿ : ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ, ಪದ್ಮನೂರು ಇದರ ವತಿಯಿಂದ ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರ ಸೌಹಾರ್ದದ ಪ್ರತೀಕವಾಗಿ 18ನೇ ವರ್ಷದ ಸಾರ್ವಜನಿಕ ಈದ್ ಮಿಲಾದ್ ಆಚರಣೆಯು ಸೆ. 6ರಂದು ಸಂಜೆ 6.30ಕ್ಕೆ ಪದ್ಮನೂರಿನಲ್ಲಿ ನಡೆಯಿತು.
ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷ ಪ್ರಕಾಶ್ ಡಿ ಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಕೆ ಎಂ ಇಕ್ಬಾಲ್ ಬಾಳಿಲ, ಕಿನ್ನಿಗೋಳಿ ಇಗರ್ಜಿಯ ಸಹಾಯಕ ಧರ್ಮಗುರು ವಂ. ಫಾ. ಲ್ಯಾನ್ಸಿ ಡಿಸೋಜ,ಐಕಳ ಪೊಂಪೈ ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ.ವಿ ಭಾಗವಹಿಸಿದ್ದರು.
ಹೆರಿಕ್ ಪಾಯ್ಸ್ ಸ್ವಾಗತಿಸಿದರು. ಶಶಿ ಸುರೇಶ್ ಮತ್ತು ಅಶೋಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಸಂತ್ ಶೆಟ್ಟಿಗಾರ್ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಈದ್ ಮಿಲಾದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಧರ್ಮ-ಜಾತಿ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಆಚರಣೆಯಲ್ಲಿ ಪಾಲ್ಗೊಂಡು ಸೌಹಾರ್ದ, ಸಹಬಾಳ್ವೆ ಹಾಗೂ ಏಕತೆಯ ಸಂದೇಶ ಸಾರಿದರು.