ಉಲ್ಲಂಜೆ ಜಂಕ್ಷನ್ ನಲ್ಲಿ ಸಿಸಿ ಕ್ಯಾಮರಾ ಆಳವಡಿಕೆ
ಕಟೀಲು;ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದ ಉಲ್ಲoಜೆ ಜಂಕ್ಷನ್ ಬಳಿ ಗ್ರಾಮಸ್ಥರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಬೇಡಿಕೆಯಂತೆ ಮುಂಜಾಗ್ರತ ಕ್ರಮವಾಗಿ ಸಿ ಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯ ಪ್ರಕಾಶ್ ಕಿನ್ನಿಗೋಳಿ, ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ,ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ಜಯರಾಮ್ ಮುಕ್ಕಾಲ್ದಿ, ಶ್ರೀದೇವಿ ಪ್ರಸಾದ್ ಶೆಟ್ಟಿ ಕೊಡೆ ತ್ತೂರು ,ಪ್ರೇಮ್ ರಾಜ್ ಶೆಟ್ಟಿ ಮೂರು ಕಾವೇರಿ ಮಹಾಮಾಯಿ ದೇವಸ್ಥಾನದ ಕೃಷ್ಣಪಾತ್ರಿ, ಕಿನ್ನಿಗೋಳಿ ಪಟ್ಟಣಪಂಚಾಯತ್ ಸದಸ್ಯರಾದ ಲೋಕಯ್ಯ ಸಾಲಿಯನ್ ಕೊಂಡೆಲಾ,
ಶೈಲೇಶ್ ಅಂಚನ್, ಯುವಶಕ್ತಿ ಫ್ರೆಂಡ್ಸಿನ ಅಧ್ಯಕ್ಷ ಉಮಾನಾಥ ಶೆಟ್ಟಿ ವಾಸು ಪೂಜಾರಿ ಪುರುಷೋತ್ತಮ ದಾಸ್ ಸ್ಥಳೀಯರಾದ ಶ್ರೀಮತಿಲಕ್ಷ್ಮಿ ಪೂಜಾರ್ತಿ, ನಾಗವೇಣಿ ಉಲ್ಲಂಜೆ ಫ್ರೆಂಡ್ಸ್ನ ಪುಷ್ಪರಾಜ್ ಯಶೋಧರ್ ಸಂದೇಶ್, ರತ್ನಾಕರ್, ನವೀನ್ ಕುಲಾಲ್, ಯಶೋಧರ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.