ಕಟೀಲಿನಲ್ಲಿ ವೈಭವದ ಮೊಸರುಕುಡಿಕೆ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೈಭವದ ಮೊಸರುಕುಡಿಕೆ ಉತ್ಸವ ನಡೆಯಿತು.
ಶುಕ್ರವಾರ ಮಣ್ಣಿನ ಕೃಷ್ಣನ ವಿಗ್ರಹ ಸ್ಥಾಪನೆ, ಅರ್ಘ್ಯಪ್ರದಾನ ನಡೆಯಿತು. ಪ್ರಸಿದ್ಧ ಕಲಾವಿದರಿಂದ ತಾಳಮದ್ದಲೆ ನಡೆಯಿತು. ಶನಿವಾರ ಬೆಳಗ್ಗೆ ಗಾಯಕ ಅಶ್ಮಿತ್ ಎ.ಜೆ ಇವರಿಂದ ಭಕ್ತಿ ಗಾನಾರ್ಚನೆ ನಡೆಯಿತು. ಮಧ್ಯಾಹ್ನದ ಬಳಿಕ ರಥಬೀದಿಯಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಕೃಷ್ಣನ ಮೂರ್ತಿಯನ್ನು ಅಜಾರುವರೆಗೆ ಚಂದ್ರಮಂಡಲ ರಥದಲ್ಲಿ ಮೆರವಣಿಗೆ ಸಾಗಿ ಬಂದು ಬಳಿಕ ರಥಬೀದಿಯಲ್ಲಿ ವಿವಿಧ ವೇಷಗಳ ನರ್ತನ ನಡೆಯಿತು. ಮಾನವ ಪಿರಮಿಡ್ ರಚಿಸಿ ಮಡಕೆಗಳನು ಒಡೆಯಲಾಯಿತು. ಬಳಿಕ ಕೃಷ್ಣನಮೂರ್ತಿಯನ್ನು ನಂದಿನಿ ನದಿಯಲ್ಲಿ ವಿಸರ್ಜಿಸಲಾಯಿತು.
ರಾತ್ರಿ ಕಟೀಲು ಮೇಳದ ಏಳೂ ದೇವರು ರಂಗಸ್ಥಳಕ್ಕೆ ಬಂದು, ಅಷ್ಟಮಿ ಪ್ರಯುಕ್ತ ವಿಶೇಷ ಆಟ ರಾತ್ರಿಯಿಡೀ ನಡೆಯಿತು.