Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು:ನೂತನ ಚಂದ್ರಮಂಡಲ ರಥದ ಮೂಹೂರ್ತ ಕಾರ್ಯಕ್ರಮ

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ  ನೂತನ ಚಂದ್ರ ಮಂಡಲ ರಥ ನಿರ್ಮಾಣವಾಗುತ್ತಿದ್ದು,ನೂತನ ರಥವನ್ನು  ದಾನಿಗಳಾದ ಉದಯ ಶೆಟ್ಟಿ ಮಡಂತ್ಯಾರ್ ಸಹಕಾರದಲ್ಲಿ ನಿರ್ಮಾಣವಾಗಲಿದೆ.ರಥಕ್ಕೆ  5  ಚಕ್ರ ಇರಲಿದ್ದು ಚಕ್ರ ತಿರುಗಿದರೆ ಮೇಲ್ಭಾಗದಲ್ಲಿಯೂ ತಿರುಗಲಿದೆ ಎಂದು ಕಟೀಲು ದೇಗುಲದ ಅರ್ಚಕ  ಹರಿನಾರಾಯಣ ದಾಸ  ಆಸ್ರಣ್ಣ ಹೇಳಿದರು. ಅವರು ಕಟೀಲು ದೇವಳದಲ್ಲಿ  ಕ್ಷೇತ್ರಕ್ಕೆ ನೂತನ ಚಂದ್ರಮಂಡಲ ರಥದ ಮೂಹೂರ್ತ ಕಾರ್ಯಕ್ರಮದಲ್ಲಿ ಮಾದ್ಯಮಕ್ಕೆ ಮಾಹಿತಿ ನೀಡಿದರು. ಪ್ರಧಾನ ಅರ್ಚಕ  ವೆಂಕಟರಮಣ ಆಸ್ರಣ್ಣ ಧಾರ್ಮಿಕ ವಿಧಿವಿಧಾನಗಳನ್ನು  ನೆರವೇರಿಸಿದರು. ಈ ಸಂದರ್ಭ ದೇವಳ ಆಡಳಿತ  ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿಯ ಅಧ್ಯಕ್ಷ, ಹಾಗೂ ಮೊಕ್ತೇಸರ  ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಲಕ್ಷೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ , ಅತ್ತೂರುಬೈಲು ವೆಂಕಟರಾಜ ಉಡುಪ ಪ್ರವೀಣ್ ದಾಸ್ ಭಂಡಾರಿ ಕೊಡೆತ್ತೂರುಗುತ್ತು, ಬಿಪಿನ್ ಚಂದ್ರ ಶೆಟ್ಟಿಕೊಡೆತ್ತೂರುಗುತ್ತು , ದಾನಿಗಳಾದ ಉದಯ ಮಡಂತ್ಯಾರು,  ಅತ್ತೂರು‌ಕೊಡೆತ್ತೂರು  ಮಾಗಣೆಯ ಭಕ್ತರು‌ ಉಪಸ್ತಿತರಿದ್ದರು.