Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸೆ.4:ಕಟೀಲಿನಲ್ಲಿ ಕೃಷ್ಣಜನ್ಮಾಷ್ಟಮೀ-ದುರ್ಗಾಜನ್ಮಾಷ್ಟಮೀ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆಪ್ಟಂಬರ್  4 ರ  ಶುಕ್ರವಾರ ಕೃಷ್ಣಜನ್ಮಾಷ್ಟಮೀ-ದುರ್ಗಾಜನ್ಮಾಷ್ಟಮೀ ಜರಗಲಿದೆ. ಶುಕ್ರವಾರ ಸಂಜೆ 5 ಕ್ಕೆ ಮೂಲ ಲಿಂಗಕ್ಕೆ ವಿಶೇಷ ಅಭಿಷೇಕ, ಅಲಂಕಾರ, ರಾತ್ರಿ ಚಂದ್ರೋದಯಕ್ಕೆ ಕೃಷ್ಣನ ಮೃಣ್ಮಯ ಮೂರ್ತಿಸ್ಥಾಪನೆ, ಅರ್ಥ್ಯಪ್ರದಾನ ನಡೆಯಲಿದೆ.
ಅಂದು ಮಧ್ಯಾಹ್ನ 2  ರಿಂದ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಲೆ ಜರಗಲಿದೆ. ಪದ್ಯಾಣ ಗೋವಿಂದ ಭಟ್, ತಲಪಾಡಿ ದೇವಿಪ್ರಸಾದ ಆಳ್ವ, ರಾಮಪ್ರಕಾಶ ಕಲ್ಲೂರಾಯ, ಅವಿನಾಶ ಬೈಪಾಡಿತ್ತಾಯ, ದೇವಿಪ್ರಸಾದ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾ.ರಂಗಾಭಟ್ಟ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಲಕ್ಷ್ಮೀನಾರಾಯಣ ಭಟ್ಟ, ಸದಾನಂದ ಅಸ್ರಣ್ಣ, ಪಶುಪತಿ ಶಾಸ್ತ್ರಿ ಭಾಗವಹಿಸಲಿದ್ದಾರೆ
ತಾ. 5ರ ಶನಿವಾರ ಮೊಸರುಕುಡಿಕೆ ಉತ್ಸವ ನಡೆಯಲಿದ್ದು, ಬೆಳಿಗ್ಗೆ 8 ರಿಂದ 10  ಗಂಟೆವರೆಗೆ ಝೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ ವಿಜೇತ ಅಶ್ಮಿತ್ ಎ.ಜೆ. ಇವರಿಂದ ಭಕ್ತಿ ಸಂಗೀತ, ಮಧ್ಯಾಹ್ನ ರಥಬೀದಿಯಲ್ಲಿ ಕೃಷ್ಣನ ಚಿತ್ರ ಬಿಡಿಸುವುದು, ಕೃಷ್ಣನ ಭಕ್ತಿಗೀತೆ ಗಾಯನ, ಕೃಷ್ಣನ ವಿವಿಧ ಹೆಸರುಗಳನ್ನು ಹೇಳುವುದು, ಸಂಗೀತ ಕುರ್ಚಿ, ಗೋಣಿಚೀಲ ಓಟ, ಮಡಕೆ ಒಡೆಯುವುದು ಅಲ್ಲದೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ 4 ಗಂಟೆಗೆ ಶ್ರೀ ಕೃಷ್ಣ ದೇವರ ಮೆರವಣಿಗೆ ನಡೆಯಲಿದೆ.
ಕಟೀಲು ಮೇಳದ ಕಲಾವಿದರಿಂದ ಅಷ್ಟಮಿ ಆಟ ರಾತ್ರಿಯಿಡೀ ನಡೆಯಲಿದೆ.