ಮಲ್ಲಿಗೆಯಂಗಡಿ ಶ್ರೀ ಕಿರಾತ ರುದ್ರ ವನದುರ್ಗಾ ಕ್ಷೇತ್ರ, ಸುಮಾರು 400 ಕುಟುಂಬಗಳಿಗೆ ಅಕ್ಕಿ ಬೇಳೆ ಮತ್ತಿತರ ಧವಸ ದಾನ್ಯಗಳ ವಿತರಣೆ
ಕಟೀಲು:ಕಟೀಲು ಸಮೀಪದ ಮಲ್ಲಿಗೆಯಂಗಡಿ ಶ್ರೀ ಕಿರಾತ ರುದ್ರ ವನದುರ್ಗಾ ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸುಮಾರು 4 ೦೦ ಕುಟುಂಬಗಳಿಗೆ ಅಕ್ಕಿ ಬೇಳೆ ಮತ್ತಿತರ ಧವಸ ದಾನ್ಯಗಳನ್ನು ವಿತರಿಸಲಾಯಿತು.ನಂತರ ಮಾತನಾಡಿದ ಕ್ಷೇತ್ರದ ಅರ್ಚಕ ಸುರೇಶ್ ಮಲ್ಲಿಗೆಯಂಗಡಿ ಅವರು ಪ್ರತೀ ವರ್ಷವೂ ಶ್ರೀ ಕೃಷ್ಣ ಜನ್ಮಾಷ್ಮಮಿಯ ಪ್ರಯುಕ್ತ ಭಕ್ತರಿಗೆ ಧವಸ ಧಾನ್ಯಗಳನ್ನು ವಿತ್ತರಿಸುತ್ತಿದ್ದೇವೆ.ಶ್ರೀ ಕ್ಷೇತ್ರದ ವತಿಯಿಂದ ಚಿಕ್ಕ ಮೇಳವಿದ್ದು, ಮೇಳದಿಂದ ಸಂಗ್ರಹವಾಗುವ ಅಕ್ಕಿ ಮತ್ತು ಭಕ್ತರ ಸಹಕಾರದಿಂದ ವಿವಿಧ ಬಗೆಯ ವಸ್ತುಗಳನ್ನು ನೀಡಲಾಗುತ್ತಿದೆ ಕಳೆದ ಬಾರಿ ಸುಮಾರು 2೦೦ ಕುಟುಂಬಗಳಿಗೆ ನೀಡಲಾಗಿದ್ದು ಈ ಬಾರಿ ಸುಮಾರು 4೦೦ ಕುಟುಂಬಗಳಿಗೆ ನೀಡುತ್ತಿದ್ದೇವೆ.ದೇವರಿಗೆ ಬಂದ ವಸ್ತುಗಳನ್ನು, ಭಕ್ತರಿಗೆ ನೀಡುತ್ತಿದ್ದೇವೆ.ಯಾವುದೇ ಕಟ್ಟಡವಿಲ್ಲದೆ ಕೇವಲ ಪ್ರಕೃತಿ ರೂಪದಲ್ಲಿ ಆರಾಧನೆಗೊಳ್ಳುವ ಈ ಕ್ಷೇತ್ರಕ್ಕೆ ಸ್ಥಳೀಯರು ಮಾತ್ರವಲ್ಲದೆ ಹೊರರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ ಎಂದರು. ಈ ಸಂದರ್ಭ ಕ್ಷೇತ್ರಕ್ಕೆ ನೂರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ರೂಪದಲ್ಲಿ ಧವಸ ಧಾನ್ಯಗಳನ್ನು ಪಡೆದರು.