Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀ ಬ್ರಹ್ಮ ಮುಗೇರಾ ಮಹಾಕಾಳಿ ದೈವಸ್ಥಾನ ಗಿಡಿಗೆರೆ ಕಟೀಲು ಇದರ ಅಂಗಸಂಸ್ಥೆಗಳ ಸಹಯೋಗದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 13 ನೇ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧೆ

ಕಟೀಲು:ಶ್ರೀ ಬ್ರಹ್ಮ ಮುಗೇರಾ ಮಹಾಕಾಳಿ ದೈವಸ್ಥಾನ ಗಿಡಿಗೆರೆ ಕಟೀಲು ಇದರ ಅಂಗಸಂಸ್ಥೆಗಳ ಸಹಯೋಗದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ  13 ನೇ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧೆ ಕಟೀಲು ಗಿಡಿಗೆರೆಯ ಶ್ರೀ ಬ್ರಹ್ಮ ಮುಗೇರಾ ಮಹಾಕಾಳಿ ದೈವಸ್ಥಾನ ಸಭಾಂಗಣದಲ್ಲಿ ನಡೆಯಿತು.

ನಿಡ್ಡೋಡಿ ಲವ್ಲಿ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ನ  ಅಧ್ಯಕ್ಷ ಬಿ.ಆರ್ ಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಶ್ರೀ ದುರ್ಗಾಂಬಿಕಾ ಯುವಕ ಯುವತಿ ಮಂಡಲ (ರಿ.) ಕಟೀಲು ಇದರ ಅಧ್ಯಕ್ಷ ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಮಹಾಮಾಯಿ ದೇವಸ್ಥಾನ ಉಳೆಪಾಡಿ ಇದರ ಧರ್ಮದರ್ಶಿ ಪಂಡಿತ್ ಮೋಹನದಾಸ್ ಸುರತ್ಕಲ್, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ  ತಿಮ್ಮಪ್ಪ ಕೋಟ್ಯಾನ್, ಕಾರ್ಕಳ ಬೈಲೂರು ಸ.ಪ.ಪೂ, ಕಾಲೇಜಿನ ಜೀವಶಾಸ್ತ್ರ ಉಪಾನ್ಯಾಸಕ  ಸುಧೀರ್, ಕಟೀಲು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ  ಕಿರಣ್ ಶೆಟ್ಟಿ ಕೊಡೆತ್ತೂರು, ಹೊಸಮನೆ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ  ಸಂತೋಷ್ ಕುಮಾರ್, ಉದ್ಯಮಿ ಮನೋಜ್ ಶಾಂತಿಪಲ್ಕೆ, ಶ್ರೀ ಬ್ರಹ್ಮ ಮುಗೇರಾ ಮಹಾಕಾಳಿ ದೈವಸ್ಥಾನ ಗಿಡಿಗೆರೆ ಕಟೀಲು ಇದರ ಗುರಿಕಾರ ತಿಮ್ಮಪ್ಪ ಮೇಸ್ತ್ರಿ, ಶ್ರೀ ಬ್ರಹ್ಮ ಮುಗೇರಾ ಮಹಾಕಾಳಿ ದೈವಸ್ಥಾನ ಗಿಡಿಗೆರೆ ಕಟೀಲು ಇದರ ಅಧ್ಯಕ್ಷ ಶ್ಯಾಮ ಡಿ.ಕೆ, ಶ್ರೀ ಬ್ರಹ್ಮ ಮುಗೇರಾ ಮಹಾಕಾಳಿ ದೈವಸ್ಥಾನ ಗಿಡಿಗೆರೆ ಕಟೀಲು ಇದರ ಅರ್ಚಕ  ಸದಾಶಿವ,ದುರ್ಗಾಂಬಿಕಾ ಯುವಕ ಮಂಡಲ ಗಿಡಿಗೆರೆ ಕಟೀಲು ಇದರ ಅಧ್ಯಕ್ಷ  ಲಕ್ಷಣ್,ತಂಗಡಿ ಸೇವಾ ಸಮಿತಿ ಗಿಡಿಗೆರೆ ಕಟೀಲು ಇದರ ಅಧ್ಯಕ್ಷೆ ಶ್ರೀಮತಿ ಭಾರತಿ ಸತೀಶ್, ಯುವತಿ ಮಂಡಲದ ಅಧ್ಯಕ್ಷೆ ನಳಿನಿ ಕೃಷ್ಣ, ದುರ್ಗಾಂಬಿಕಾ ಯುವಕ ಮಂಡಲ ಗಿಡಿಗೆರೆ ಕಟೀಲು ಇದರ ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್.ಎಮ್ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ನಿವೃತ ಉಪನ್ಯಾಸಕಿ ಶ್ರೀಮತಿ ರೋಹಿಣಿ, ಕಾರ್ಕಳ ಬೈಲೂರು ಸ.ಪ.ಪೂ.ಕಾಲೇಜಿನ  ಜೀವಶಾಸ್ತ್ರ ಉಪಾನ್ಯಾಸಕ  ಸುಧೀರ್, ಕಾರ್ಕಳ ಮಂಜುನಾಥ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ಉಪನ್ಯಾಸಕಿ  ಶ್ರೀಮತಿ ಶಶಿಕಲಾ ಎನ್, ಕಟೀಲು ಕಾಲೇಜಿನ ನಿವೃತ ಉಪನ್ಯಾಸಕ ಸುರೇಶ್ ಕಟೀಲು, ಕಟೀಲು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಇವರನ್ನು ಸನ್ಮಾನಿಸಲಾಯಿತು.

ಕುಮಾರಿ ಲಾಸ್ಯ ಕಟೀಲು ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮಣ್ ಸ್ವಾಗತಿಸಿ, ಸತೀಶ್ ವಂದಿಸಿದರು.