ಹಳೆಯಂಗಡಿ:ತುಳು ಭಾಷೆಗೆ ಆಡಳಿತ ಭಾ಼ಷೆಯ ಸ್ಥಾನಮಾನ- ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಭಿನಂದನೆ
ಮುಲ್ಕಿ: ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತ್ರತ್ವದ ಕಾಂಗ್ರೆಸ್ ಸರ್ಕಾರವು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ 2ನೇ ಹೆಚ್ಚುವರಿ ಆಡಳಿತ ಭಾ಼ಷೆಯ ಸ್ಥಾನಮಾನ ನೀಡುವ ಮೂಲಕ ತುಳುವರ ಹಲವಾರು ವರ್ಷಗಳ ಬೇಡಿಕೆಗೆ ಮನ್ನಣೆ ನೀಡಿದೆ.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವಕಾಶವಿದ್ದರೂ ಅದನ್ನು ಪೂರೈಸದ ಬಿಜೆಪಿಯು ಜಿಲ್ಲೆಯಲ್ಲಿ ಹಿಂದುತ್ವದ ಮೂಲಕ ಕೋಮು ಸಂಘರ್ಸವನ್ನು ಸೃಷ್ತಿಸುವ ಕಾರ್ಯ ಮಾಡುತ್ತಿದೆ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಹೇಳಿದರು.
ಹಳೆಯಂಗಡಿಯ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ನ ಪತ್ರಿಕಾ ಗೋಷ್ತಿಯಲ್ಲಿ ತುಳುವರ ಬೇಡಿಕೆಯನ್ನು ಈಡೇರಿಸಿದ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ರನ್ನು ಅಭಿನಂದಿಸಿ ಮಾತನಾಡಿದ ಅವರು ಉಭಯ ಜಿಲ್ಲೆಗೆ ಸುಮಾರು 15,000 ಕೋಟಿ ಅನುದಾನವನ್ನು ನೀಡಿದ್ದು ದಾಖಲೆಯಾಗಿದೆ.ಮಂಗಳೂರು ಜಿಲ್ಲೆ ಹೆಸರು ಬದಲಾವಣೆಗೆ ಜನಾಭಿಪ್ರಾಯ ಸಂಗ್ರಹ. ಮೂಡುಬಿದಿರೆ ಕ್ಷೇತ್ರದ ಅಭಿವೃದ್ದಿ ಫಲಿಮಾರು ಸೇತುವೆ.ಕಟೀಲು ಸೇತುವೆ,ಗುರುಪುರ ಸೇತುವೆ ಅಭಿವೃದ್ದಿಗೆ ಅನುದಾನ ಬಿಡುಗಡೆಗೊಂಡಿದ್ದು, ಮಳವೂರಿನಿಂದ ಮುಲ್ಕಿ,ಕಿನ್ನಿಗೋಳಿ,ಬಜಪೆ ಪ್ರದೇಶಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಘೋಷಿಸಿದ್ದಾರೆ.ಕಾಂಗ್ರೆಸ್ ಪಕ್ಷವು ಅಭಿವೃದ್ದಿ ವಿಷಯದಲ್ಲಿ ಯಾವುದೇ ರಾಜಕೀಯ ರಹಿತವಾಗಿ ಅಭಿವೃದ್ಧಿ ಮಾಡುತ್ತಿದೆ. ಬಿಜೆಪಿಯವರಿಗೆ ಅಭಿವೃದ್ಧಿ ಯ ಅಗತ್ಯವಿಲ್ಲ.
.ಜನರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಅಜೆಂಡಾವಾಗಿದ್ದು
ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಡಿಸೆಂಬರ್ ನಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು ಪಕ್ಷವು ಚುನಾವಣೆಗೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.ಈ ಬಾರಿ ಜಿಲ್ಲೆಯ ಜನತೆ ಕಾಂಗ್ರೆಸ್ ಪರವಾಗಿದ್ದು ,ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಜಯಭೇರಿ ಗಳಿಸಲಿದೆ ಎಂದು ಅವರು ಹೇಳಿದರು.
ಈ ಸಂದರ್ಭ
ಕೆಪಿಸಿಸಿ ಸದಸ್ಯ ವಸಂತ್ ಬರ್ನಾಡ್. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮಂಜುನಾಥ ಕಂಬಾರ,ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ಪೂಜಾರಿ.ಕಾರ್ಯದರ್ಶಿ ಸರ್ಫರಾಜ್, ಮೂಡುಬಿದಿರೆ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಶಯನ್ ಕುಮಾರ್.ಪಕ್ಷದ ನಾಯಕರಾದ ಹಸನಬ್ಬ. ಗುರುರಾಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.