ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ.)ಯ ಬೆಳ್ಳಿ ಹಬ್ಬ ಸಮಾರಂಭ
ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಅಧಿಕೃತವಾಗಿ ಪವರ್ ಕಟ್ಟ್ ಆಗಿದ್ದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಂದು ತಿಂಗಳು ಮಾತ್ರ. ಇತರ ಸಂದರ್ಭದಲ್ಲಿ ಇನ್ನಿತರ ಕಾರಣದಿಂದಾಗಿ ಅನಧಿಕೃತವಾಗಿ ವಿದ್ಯುತ್ ಸಮಸ್ಯೆಯಾಗಿರಬಹುದು. ನಿಜವಾಗಿಯೂ ಜಿಲ್ಲೆಗಳಲ್ಲಿ ವಿದ್ಯುತ್ ಸಮಸ್ಯೆ ಇಲ್ಲದಂತೆ ಮಾಡುವ ಪ್ರಯತ್ನ ನಮ್ಮದು ಎಂದು ಕರ್ನಾಟಕ ಸರಕಾರದ ಇಂಧನ ಸಚಿವ ಕೆ. ಜೆ. ಜಾರ್ಜ್ ಹೇಳಿದರು.
ಸೆ. 6ರಂದು ಮಂಗಳೂರಿನ ಪುರಭವನದಲ್ಲಿ ಜರಗಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ.)ಯ ಬೆಳ್ಳಿ ಹಬ್ಬ ಸಮಾರಂಭದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಪ್ರದೇಶವು ಶ್ರೀನಿವಾಸ ಮಲ್ಯ ಹಾಗೂ ಜಾರ್ಜ್ ಫೆರ್ನಾಂಡೀಸ್ ರವರ ಪ್ರಯತ್ನ ದಿಂದ ವಿಮಾನ ನಿಲ್ಧಾಣ ಸೇರಿ ಹಲವು ಅಭಿವೃದ್ದಿ ಕಾರ್ಯಗಳು ನಡೆದಿದ್ದು ಇಂತಹ ವ್ಯಕ್ತಿಗಳು ಮುಂದೆ ಬಂದಲ್ಲಿ ಕರಾವಳಿ ಪ್ರದೇಶಗಳು ಶ್ರೀಘ್ರದಲ್ಲೇ ಮತ್ತಷ್ಟು ಅಭಿವೃದ್ದಿ ಹೊಂದುದರಲ್ಲಿ ಸಂದೇಹವಿಲ್ಲ ಎಂದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ.)ಯು ಕರಾವಳಿಯ ಅಭಿವೃದ್ದಿಯ ಬಗ್ಗೆ ಕೈಗೊಂಡ ಯೋಜನೆಯ ಬಗ್ಗೆ ನಾನು ಮತ್ತು ಆರೋಗ್ಯ ಸಚಿವ ಯು ಟಿ ಖಾದರ್ ಅವರು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಿದ್ದು ಅವರು ಅದಕ್ಕೆ ಸ್ಪಂದಿಸುವ ಭರವಸೆಯಿದೆ ಎಂದರು.
ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಉದ್ಘಾಟನಾ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದ್ದು, ಸಮಿತಿಯ ಅಧ್ಯಕ್ಷ ತೋನ್ಸೆ ನಿತ್ಯಾನಂದ ಡಿ. ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಎನ್‌ಆರ್‌ಐ ಡಿಸ್ಟಿಂಗ್ವಿಶ್ಡ್ ಫೆಲೋ ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್ (ಇಂಡಿಯಾ–ಗ್ಲೋಬಲ್)ನ ಡಾ. ರೊನಾಲ್ಡ್ ಕೋಲಾಸಾ ಅವರು . ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ಭವಿಷ್ಯದ ಯೋಜನೆ, ಕೈಗಾರಿಕಾ ಮತ್ತು ವಾಣಿಜ್ಯ ಅಭಿವೃದ್ಧಿಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.
ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಸಮಿತಿಯ ಮುಂದಿನ ಯೋಜನೆ ಕುರಿತು ಮಾತನಾಡಿದರು.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ,ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ವಿಧಾನಸಭಾ ಸದಸ್ಯ ಹಾಗೂ ಡಿ. ವೇದವ್ಯಾಸ ಕಾಮತ್, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ್ ಯು ದೇವಾಡಿಗ ಹಾಗೂ ದುಬೈನ ಕೈಗಾರಿಕೋದ್ಯಮಿ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಇತರ ಗಣ್ಯರಾದ ಕೆ ಜೆ ಜೋರ್ಜ್, ಎಮ್ ಎ ಗಫೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಿತಿಯ ಜಿಲ್ಲೆಯ ಕಾರ್ಯಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾಣಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಸಮಿತಿಯ ವಕ್ತಾರ ದಯಾಸಗರ್ ಚೌಟ ನಿರೂಪಿಸಿದರು . ಗೌರವ ಪ್ರಧಾನ ಕಾರ್ಯದರ್ಶಿ, ಮುಂಡ್ಕೂರು ಸುರೇಂದ್ರ ಸಾಲಿಯಾನ್ ಧನ್ಯವಾದ ನೀಡಿದರು.
ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ, ರಾಜ್ಯ ಸಂಚಾಲಕ ಕೆ. ಪಿ. ಜಗದೀಶ್ ಅಧಿಕಾರಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಡಾ. ಆರ್. ಕೆ. ಶೆಟ್ಟಿ, ಸಮಿತಿಯ ವಕ್ತಾರ ದಯಾಸಾಗರ ಚೌಟ, ಜಿಲ್ಲಾ ಸಮಿತಿಯ ಗೌರವ ಕಾರ್ಯದರ್ಶಿಗಳಾದ ಜಿ. ಟಿ. ಆಚಾರ್ಯ ಮತ್ತು ಸುರೇಂದ್ರ ಮೆಂಡನ್, ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ, ಸಲಹೆಗಾರರು, ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತು ಜಿಲ್ಲಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು .
ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಮಾಧ್ಯಮಗಳು ಸಕಾರಾತ್ಮಕ ವರದಿಗೆ ಮಹತ್ವ ನೀಡಬೇಕು. ಶೇಖಡಾ ಹತ್ತರಷ್ಟು ನಕಾರಾತ್ಮಕ ಸುದ್ದಿಯನ್ನು ಹರಡಿಸಿದಲ್ಲಿ ಉಳಿದ ಶೇಖಡಾ ತೊಂಬತ್ತು ಸಕಾರಾತ್ಮಕ ಕಾರ್ಯಕ್ಕೆ ಹಾನಿಯಾಗುತ್ತದೆ:ಸಚಿವ ಯು ಟಿ ಖಾದರ್
ರಾಜ್ಯದ ಹಾಗೂ ಜಿಲ್ಲೆಯ ಜನತೆಯ ಪರವಾಗಿ ಬೆಳ್ಳಿ ಹಬ್ಬ ಆಚರಿಸುತ್ತಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ.) ಅಭಿನಂದನೆ ಸ್ವೀಕರಿಸಿ ದ ನಾಟಕ ಸರಕಾರದಆರೋಗ್ಯ ಸಚಿವ ಯು ಟಿ ಖಾದರ್ ಅವರು ಮಾತನಾಡಿ ನಾನು ವಿದ್ಯಾರ್ಥಿ ಜೀವನದಲ್ಲೇ ಸಮಿತಿಯ ಬಗ್ಗೆ ಅರಿತಿದ್ದು ಆಗ ನನಗೆ ಇದರ ಮಹತ್ವ ಅರಿವಾಗಲಿಲ್ಲ. ಯುವ ಜನಾಂಗಕ್ಕೆ ಸಮಿತಿಯ ಹೋರಾಟದ ಉದ್ದೇಶದ ಅರಿವು ಆಗಬೇಕಾಗಿದೆ. ಆಗ ಮಾತ್ರ ಯಾವುದೇ ಅಡ್ಡಿಯಿಲ್ಲದೆ ದೊಡ್ಡ ದೊಡ್ಡ ಕಂಪೆನಿಗಳು ಸ್ಥಾಪನೆಯಾಗಿ ಯುವ ಜನಾಂಗಕ್ಕೆ ಉದ್ಯೋಗ ದೊರೆಯುವುದು ಮಾತ್ರವಲ್ಲದೆ ಆ ಪ್ರದೇಶದ ಅಭಿವೃದ್ದಿಯೂ ಆಗುತ್ತದೆ. ಒಂದು ಯೋಜನೆಯಿಂದ ಆ ಪರಿಸರದ ಎಲ್ಲರಿಗೂ ಲಾಭದಾಯಕವಾಗುತ್ತದೆ. ಜನರ ಸಹಕಾರವಿದ್ದಲ್ಲಿ ಸಚಿವ ಕೆ ಜೆ ಜಾರ್ಜ್ ಅವರ ಮುಖಾಂತರ ಸಮಿತಿಯ ಯೋಜನೆಗೆ ಸಹಕರಿಸುವೆನು. ಮಾಧ್ಯಮಗಳು ಸಕಾರಾತ್ಮಕ ವರದಿಗೆ ಮಹತ್ವ ನೀಡಬೇಕು. ಶೇಖಡಾ ಹತ್ತರಷ್ಟು ನಕಾರಾತ್ಮಕ ಸುದ್ದಿಯನ್ನು ಹರಡಿಸಿದಲ್ಲಿ ಉಳಿದ ಶೇಖಡಾ ತೊಂಬತ್ತು ಸಕಾರಾತ್ಮಕ ಕಾರ್ಯಕ್ಕೆ ಹಾನಿಯಾಗುತ್ತದೆ ಎಂದರು.