ದೇವಾಡಿಗ ಸಮುದಾಯದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ”-ವೀರಪ್ಪ ಮೊಯಿಲಿ
ಮಂಗಳೂರು: “ದೇವಾಡಿಗ ಸಮುದಾಯಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲ. ಸ್ಯಾಕ್ರೋಫೋನ್, ನಾದಸ್ವರ ಮುಂತಾದ ಕಲೆಗಳಲ್ಲಿ ನಮ್ಮ ಸಮುದಾಯದ ಅನೇಕರು ಸಾಧನೆ ಮಾಡಿದ್ದಾರೆ. ಅವರಿಂದ ನಮ್ಮಸಮುದಾಯ ಶ್ರೀಮಂತವಾಗಿದೆ“ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ ಅವರು ಹೇಳಿದರು. ಆದಿತ್ಯವಾರ ನಗರದ ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆಶ್ಚನ್ ಸೆಂಟರ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಘಟಕದ ಅಧ್ಯಕ್ಷ ಅಶೋಕ್ ಮೊಯಿಲಿ ಮಾತನಾಡಿ, “ದೇವಾಡಿಗ ಸಂಘವು ಸಮುದಾಯದ ಆಶಾಕಿರಣವಾಗಿ ಬೆಳೆಯುತ್ತಿದೆ. ಅನೇಕ ಜನಪರ-ಪ್ರಗತಿಪರ ಕಾರ್ಯಕ್ರಮ ಹಮ್ಮಿಕೊಂಡು ಸಮಾಜ ಬಾಂಧವರಲ್ಲಿ ಜಾತಿ ಪ್ರಜ್ಞೆ ಧಾರ್ಮಿಕ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಮೂಡಿಸಿದೆ“ ಎಂದರು.
ದೇವಾಡಿಗ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನ್ಯೂರೋ ಸರ್ಜನ್ ಡಾ| ಕೆ.ವಿ. ದೇವಾಡಿಗ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರನ್ನುವೇದಿಕೆಯಲ್ಲಿ ಸಂಘದ ವತಿಯಿಂದ ಗೌರವಿಸಲಾಯಿತು.
ವಿಷನ್ ಮಂಗಳದ ಗೌರವಾಧ್ಯಕ್ಷ ಡಾ। ದೇವದಾಸ್ ಕೆ., ಹರೀಶ್ ಶೇರಿಗಾರ್, ಡಾ| ಕೆ. ದೇವರಾಜ್, ಕರುಣಾಕರ ಎಂ.ಎಚ್., ಧರ್ಮಪಾಲ ಯು. ದೇವಾಡಿಗ, ಡಾ| ಬಿ.ಎಸ್. ಶೇರಿಗಾರ್, ಮೋಹನ್ ದಾಸ್, ರವಿ ಸುಬ್ಬಯ್ಯ ದೇವಾಡಿಗ, ಕೆ.ಜೆ. ದೇವಾಡಿಗ, ನಾರಾಯಣ ದೇವಾಡಿಗ, ದಿನೇಶ್ ದೇವಾಡಿಗ, ಬಾಬು ದೇವಾಡಿಗ, ಭಾಸ್ಕರ್ ಶೇರಿಗಾರ್, ಆಲೂರು ರಘು ರಾಮ್ ದೇವಾಡಿಗ, ನಾಗರಾಜ್ ದೇವಾ ಡಿಗ, ಸುರೇಶ್ ಚಂದಪ್ಪ ದೇವಾಡಿಗ, ಶೇಖರ್ ದೇವಾಡಿಗ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ವಾನ್ ಅಣ್ಣು ದೇವಾಡಿಗ ಧರ್ಮಸ್ಥಳ, ಗೋಪಾಲ್ ಶೇರಿಗಾರ್ ಹಾಗೂ ಲಲಿತಾ ದಂಪತಿ, ಡಾ| ಪ್ರವೀಣ್ ಕುಮಾರ್ ಹೊಸಬೆಟ್ಟು, ಜಯಾನಂದ ದೇವಾಡಿಗ ಅವರ ಪರವಾಗಿ ಸರೋಜಿನಿ, ದಿ। ವಾಮನ್ ಮರೋಳಿ ಅವರ ಮರಣೋತ್ತರ ಗೌರವ ಹಾಗೂ ವೇಣಿ, ಭಾಸ್ಕರ್ ಕೆ., ವಿಜಯಲಕ್ಷ್ಮೀ ಶಿಬರೂರು, ವಿಶ್ವನಾಥ ಶೇರಿಗಾರ್, ಪ್ರವೀಣ್ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್ ಸ್ವಾಗತಿಸಿದರು. ಖಜಾಂಚಿ ಗೀತಾ ವಿ. ಕಲ್ಯಾಣಪುರ ವಂದಿಸಿದರು.