Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸ್ವಉದ್ಯೋಗದಿಂದ ಸ್ವಾಭಿಮಾನದ ಬದುಕು ಸಾಧ್ಯ - ಶ್ರೀಮತಿ ಶ್ರದ್ದಾ ಅಮಿತ್

ಬಜಪೆ:ಸ್ವಉದ್ಯೋಗದಿಂದ ಸ್ವಾಭಿಮಾನದ  ಬದುಕು ಸಾಧ್ಯ ಎಂದು  ಬೆಂಗಳೂರಿನ ಕ್ಷೇಮವನದ  ಕಾರ್ಯ ನಿರ್ವಾಹಕ ನಿರ್ದೇಶಕಿ  ಶ್ರೀಮತಿ ಶ್ರದ್ದಾ ಅಮಿತ್  ಹೇಳಿದರು.ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಜಪೆ ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ
ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ  ಶುಭಾಶೀರ್ವಾದಗಳೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ  ಬಜಪೆಯ ಸ್ವಾಮಿಲಪದವಿನ  ಸ್ಕೈ ಗಾರ್ಡನ್ ನಲ್ಲಿ  ಶುಕ್ರವಾರ ನಡೆದ 
ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ಮಹಿಳೆಯರಿಗೆ ತರಭೇತಿ ನೀಡಿ  ಸ್ವ ಉದ್ಯೋಗವನ್ನು ಕಲ್ಪಿಸಿದೆ.ಈಗಾಗಲೇ ಯೋಜನೆಯಿಂದ 47 ಲಕ್ಷ ಮಿಲಿಯನ್ ಜನರು ಸ್ವ ಉದ್ಯೋಗವನ್ನು ಪಡೆದಿದ್ದಾರೆ.73,000 ರುಡ್ ಸೆಟ್ ನಿಂದ ತರಭೇತಿ ಪಡೆದು ಸ್ವ ಉದ್ಯೋಗವನ್ನು ಮಾಡುತ್ತಿದ್ದಾರೆ.63000  ಜನರು ಸಾಲವನ್ನು ಪಡೆದು ಉದ್ಯಮವನ್ನು ನಡೆಸುತ್ತಿದ್ದಾರೆ ಎಂದರು. 
ಕಾರ್ಯಕ್ರಮಕ್ಕೆ ಆಗಮಿಸಿದ ಶ್ರದ್ದಾ ಅಮಿತ್ ರವರನ್ನು ಚೆಂಡೆ,ಕೊಂಬು ವಾದನ,ವೇಷಭೂಷನಗಳೊಂದಿಗೆ ಅದ್ದೂರಿಯಾಗಿ  ಸ್ವಾಗತಿಸಿ ವೇದಿಕೆಗೆ ಕರೆ ತರಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಅವರು 
ಮಹಿಳೆಯರು ಒಟ್ಟು ಸೇರಿ  ವೇದಿಕೆಯಲ್ಲಿ ನಿಂತು  ಮಾತನಾಡುವ ಶಕ್ತಿ ಇಲ್ಲದ
 ಕಾಲ ಘಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ವಿಸ್ತರಣೆಯಾಗಿ ಪ್ರತಿ ಮನೆ ಯಲ್ಲಿಯೂ ನಂದಾದೀಪ ಉರಿಯಲು ಪ್ರಾರಂಭವಾಗಿದೆ.ಇಂದು ಅನೇಕರು ಒಮ್ಮತದ ಒಗ್ಗಟ್ಟು ಹಾಗೂ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು   ಮದ್ಯವರ್ಜನ ಶಿಬಿರಗಳು ಅನೇಕರ ಜೀವನದಲ್ಲಿ ಬದಲಾವಣೆ ತಂದಿದ್ದು,ಉತ್ತಮವಾದ ಜೀವನವನ್ನು ನಡೆಸಲು ಸಾಧ್ಯವಾಗಿದೆ.ಮದ್ಯವರ್ಜನ ಶಿಬಿರಗಳು ಕೇವಲ ಮದ್ಯಪಾನವನ್ನು ಬಿಡಿಸುವ ಕೇಂದ್ರಗಳಲ್ಲ; ಅವು ವ್ಯಕ್ತಿಗೆ ಹೊಸ ಆಶೆ, ಹೊಸ ಚಿಂತನೆ ಮತ್ತು ಹೊಸ ಬದುಕನ್ನು ಕಲ್ಪಿಸಿದೆ.


ಈ ಸಂದರ್ಭ ವಾತ್ಸಲ್ಯ ಯೋಜನೆಯಡಿ  ಗುಲಾಬಿ  ಎಂಬುವವರಿಗೆ ಮನೆ ಹಸ್ತಾಂತರ,ಶೋಭಾ ಮತ್ತು ರುಕ್ಮಿಣಿಯವರಿಗೆ ಸಹಾಯಧನ, ಸಂಘದ ಸದಸ್ಯೆ ಆಯಿಷಾ ಅವರಿಗೆ  ಅಟೋರಿಕ್ಷಾ  ಹಾಗೂ 3  ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿಯಡಿಯಲ್ಲಿ  ಶಿಷ್ಯವೇತನವನ್ನು ವಿತರಿಸಲಾಯಿತು.


ಸೂರ್ಯಕಾಂತಿ ಚಾರಿಟೇಬಲ್ ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷೆ  ಶ್ರೀಮತಿ ವಿದ್ಯಾ ರಾಕೇಶ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ  ಸ್ವ ಉದ್ಯೋಗದಿಂದ ಸ್ವಾಭಿಮಾನದ ಬದುಕು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ,ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಮಂಗಳೂರು ಅಧ್ಯಕ್ಷೆ ಶ್ರೀಮತಿ ಸುಖಲತಾ ಶೆಟ್ಟಿ, ದ.ಕ ಜಿಲ್ಲಾ ನಿರ್ದೇಶಕ ದಿನೇಶ್,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬಜಪೆ  ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ. ,ಜ್ಞಾನವಿಕಾಸ ಸಮನ್ವಯಾಧಿಕಾರಿ/ವಲಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಮತ್ತು ಸರ್ವಸದಸ್ಯರುಗಳು ಉಪಸ್ಥಿತರಿದ್ದರು.ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ  ಸ್ವಾಗತಿಸಿದರು.ಸಂಧ್ಯಾ ಉಲೈಬೆಟ್ಟು ಕಾರ್ಯಕ್ರಮ ನಿರೂಪಿಸಿದರು.ಪ್ರಮೀಳಾ ವಂದಿಸಿದರು.



ಹೂಗುಚ್ಚ ಸ್ಪರ್ಧೆ,ರಂಗೋಲಿ ಸ್ಪರ್ಧೆ,ಜಾನಪದ ನೃತ್ಯ ಪ್ರದರ್ಶನ ,ಸ್ವುದ್ಯೋಗದ ಮಳಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತು.