ಇತಿಹಾಸ ಪ್ರಸಿದ್ಧ ಪೇಜಾವರ ಪ್ಯಾರಾ ಮುಹ್ಯುದ್ದೀನ್ ಜಮಾ ಮಸೀದಿಯ ನೂತನ ಆಡಳಿತ ಸಮಿತಿ ರಚನೆ
ಬಜಪೆ : ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ಮುಹ್ಯುದ್ದೀನ್ ಜಮಾ ಮಸೀದಿ, ಪ್ಯಾರಾ ಇದರ ನೂತನ ಆಡಳಿತ ಸಮಿತಿಯ ಆಯ್ಕೆಗಾಗಿ ವಾರ್ಷಿಕ ಮಹಾಸಭೆಯು ಹಾಜಿ ಕೆ.ಐ. ಬದ್ರುದ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜನಾಬ್ ಕೆ.ಎಚ್. ಹುಸೇನ್ ಶರೀಫ್ ಹಾಗೂ ಕಾರ್ಯದರ್ಶಿಯಾಗಿ ಬಿ.ಎಂ. ಮೊಹಮ್ಮದ್ ರಫೀಕ್ ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಬೂಬಕ್ಕರ್ ಭಾವ , ಕಾರ್ಯದರ್ಶಿಗಳಾಗಿ ಅಬ್ದುಲ್ ಕಾದರ್ ಅಡ್ಮಾ ಹಾಗೂ ಇಕ್ಬಾಲ್ ಪ್ಯಾರಾ,ಆಂತರಿಕ ಲೆಕ್ಕ ಪರಿಶೋಧಕರಾಗಿ ಟಿ.ಎಚ್. ಇಬ್ರಾಹಿಂ , ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಅಜೀಜ್ ಪಟ್ಟಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆ.ಐ. ಯೂಸುಫ್ ಹಾಜಿ , ಶಬೀರ್, ನಿಸಾರ್ ಕರಾವಳಿ, ಎಂ.ಕೆ. ಅಶ್ರಫ್, ಅಮೀರ್ ಹುಸೇನ್ ಪ್ಯಾರಾ, ರೆಹಮನ್ ಕರಂಬಾರ್ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಯಿತು.ಈ ನೂತನ ಆಡಳಿತ ಸಮಿತಿಯ ಅವಧಿ ಮೂರು ವರ್ಷಗಳಾಗಿರುತ್ತದೆ.
ಪ್ಯಾರಾದ ಇತಿಹಾಸ ಪ್ರಸಿದ್ಧ ಮಹ್ಯುದ್ದೀನ್ ಜಮಾ ಮಸೀದಿ ಹಾಗೂ ಪವಿತ್ರ ಶೈಖ್ ಹಾಜಿ ವಳಿಯುಲ್ಲಾಹ್ ದರ್ಗಾ ಶರೀಫ್ ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ.