Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಫುಟ್ಬಾಲ್ ಪಂದ್ಯಾಟ ಬಜ್ಪೆ ಸಂತ ಜೋಸೆಫರ ಪ್ರೌಢಶಾಲಾ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಬಜಪೆ:ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಬಜ್ಪೆ ಇಲ್ಲಿನ ಪ್ರೌಢಶಾಲಾ ವಿಭಾಗದ 17 ರ 
ವಯೋಮಿತಿಯ ಬಾಲಕಿಯರ ತಂಡ  ವಿಜೇತರಾಗಿದ್ದು, ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಚೇರಿ ,  ರೆಹಮಾನಿಯ ಆಂಗ್ಲ ಮಾಧ್ಯಮ ಶಾಲೆ ಸೋಮೇಶ್ವರ ಉಚ್ಚಿಲ ಇವರ ಆಶ್ರಯದಲ್ಲಿ ನಡೆದ ಪಂದ್ಯಾಟದಲ್ಲಿ 4-3 ಪೆನಾಲ್ಟಿ ಗೋಲಿನಿಂದ ವಿಜೇತರಾಗಿದ್ದು ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದಿರುತ್ತಾರೆ.  ಕ್ರೀಡಾಪಟುಗಳು ದೈಹಿಕ ಶಿಕ್ಷಣ ಶಿಕ್ಷಕ  ಸಂತೋಷ್ ಮಸ್ಕರೇನಸ್ ಇವರಿಂದ ತರಬೇತಿ ಪಡೆದಿರುತ್ತಾರೆ. ಸಂಸ್ಥೆಯ ಫಾತಿಮಾ ಶಜಾ ಇವರು ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. 

17ರ ವಯೋಮಿತಿಯ ಬಾಲಕರ ಪಂದ್ಯಾಟದಲ್ಲಿ ಮಂಗಳೂರು ದಕ್ಷಿಣ ವಲಯವನ್ನು ಪ್ರತಿನಿಧಿಸಿದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ರಥಿಕ್, ರೇಗನ್, ರಿಯೊನ್, ಗೃಹೀಶ್, ರಶೀಲ್, ಆರೋನ್ , ರಿತ್ವಿಕ್ ಇವರ ತಂಡ ವಿಜೇತರಾಗಿದ್ದು, ರಥಿಕ್, ರಿಯೋನ್, ರೇಗನ್ ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.