Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸರಕಾರಿ ಪ್ರೌಢ ಶಾಲೆ, ಬಡಗ ಎಕ್ಕಾರು ಮಂಗಳೂರು ಉತ್ತರ: ವಿದ್ಯಾರ್ಥಿಗಳಿಗೆ ಉಚಿತ ಐಡಿ ಕಾರ್ಡ್ ವಿತರಣೆ



ಬಜಪೆ:ಶ್ರೀ ದುರ್ಗಾ ಕಲ್ಚರಲ್ ಅಂಡ್ ಕ್ರಿಕೆಟ್ ಕ್ಲಬ್ (ರಿ)  ಎಕ್ಕಾರು ಇವರ ವತಿಯಿಂದ ಸರಕಾರಿ ಪ್ರೌಢ ಶಾಲೆಯ 70 ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ (ಐಡಿ ಕಾರ್ಡನ್ನು) ವಿತರಿಸಲಾಯಿತು. ಗುರುತು ಚೀಟಿಯನ್ನು ಶ್ರೀ ದುರ್ಗ ಕಲ್ಚರಲ್ ಅಂಡ್ ಕ್ರಿಕೆಟ್ ಕ್ಲಬ್ ರಿಜಿಸ್ಟರ್ಡ್ ಎಕ್ಕಾರು ಇವರು ಪ್ರಾಯೋಜಿಸಿದರು.ಈ ಸಂದರ್ಭದಲ್ಲಿ ಶ್ರೀ ದುರ್ಗಾ ಕಲ್ಚರಲ್ ಅಂಡ್ ಕ್ರಿಕೆಟ್ ಕ್ಲಬ್ (ರಿ) ಎಕ್ಕಾರು ಇದರ ಅಧ್ಯಕ್ಷ ಗಣೇಶ್ ಶೆಟ್ಟಿ, ಗೌರವಾಧ್ಯಕ್ಷರುಗಳಾದ  ಪ್ರಕಾಶ್ ಕುಕ್ಯಾನ್ ,  ಸುದೀಪ್ ಆರ್ ಅಮೀನ್,  ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ  ರತನ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯನಿ ಶ್ರೀಮತಿ ಇಂದಿರಾ ಎನ್ ರಾವ್ ಉಪಸ್ಥಿತರಿದ್ದರು.