ಬಜಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ಚೆನ್ನಪ್ಪ ಸಾಲ್ಯಾನ್ ನಿಧನ
ಬಜಪೆ: ಬಜಪೆ ಪಟ್ಟಣ ಪಂಚಾಯತ್ ನ ಸಿದ್ದಾರ್ಥ ನಗರ ವಾರ್ಡ್-19ರ ಕೌನ್ಸಿಲರ್ ಚೆನ್ನಪ್ಪ ಸಾಲ್ಯಾನ್(56) ರವರು ಅಲ್ಪ ಕಾಲದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಇವರು ಮಳವೂರು ಗ್ರಾಮ ಪಂಚಾಯತ್, ಕೆಂಜಾರು 3ನೇ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರಾಗಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೆಂಜಾರು ಮೂರನೇ ವಾರ್ಡ್ ನ ಗ್ರಾಮ ಸಮಿತಿಯ ಗ್ರಾಮ ಸಂಚಾಲಕರಾಗಿ, ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಬಣದ ಸಕ್ರಿಯ ಕಾರ್ಯಕರ್ತರಾಗಿಯೂ ಇದ್ದರು. ಅನಾರೋಗ್ಯದ ನಡುವೆಯೂ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದ ಚೆನ್ನಪ್ಪ ಸಾಲ್ಯಾರವರು ಮಿತ ಭಾಷಿಯು, ಸೌಮ್ಯ ಸ್ವಭಾವದವರಾಗಿದ್ದರು.
ಚೆನ್ನಪ್ಪ ಸಾಲ್ಯಾನ್ ರವರು ಪತ್ನಿ, ಸಹೋದರರು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.