ಬಜ್ಪೆ ಮುಹಿದ್ದೀನ್ ಜುಮಾ ಮಸೀದಿಯ ನೂತನ ಖಾಝಿ ಯಾಗಿ ಸಯ್ಯಿದ್ ನಾಸಿರ್ ಅಬ್ದುಲ್ ಹಯ್ಯ್ ಶಿಯಾಬ್ ತಂಙಳ್ ಆಯ್ಕೆ
ಬಜ್ಪೆ: ಬಜ್ಪೆ ಮುಹಿದ್ದೀನ್ ಜುಮಾ ಮಸೀದಿಯ ನೂತನ ಖಾಝಿ ಯಾಗಿ ಸಯ್ಯಿದ್ ನಾಸಿರ್ ಅಬ್ದುಲ್ ಹಯ್ಯ್ ಶಿಯಾಬ್ ತಂಙಳ್ ಅವರು ಆಯ್ಕೆಯಾಗಿದ್ದಾರೆ.
ಬಜ್ಪೆ ಮುಹಿದ್ದೀನ್ ಜುಮಾ ಮಸೀದಿಯಲ್ಲಿ ನಡೆದ ಖಾಝಿ ಸ್ವೀಕಾರ ಸಮಾರಂಭದಲ್ಲಿ ಮಸೀದಿಯ ಆಡಳಿತ ಸಮಿತಿ ಹಾಗೂ ವಿವಿಧ ಹುದ್ದೆಗಳ ಪದಾಧಿಕಾರಿಗಳು, ಉಸ್ತಾದರು, ಜಮಾಅತ್ ಸದಸ್ಯರು ಮತ್ತು ಊರಿನ ಪ್ರಮುಖರು ಭಾಗವಹಿಸಿದ್ದರು.
ನೂತನ ಖಾಝಿ ಯವರಿಗೆ ಗೌರವ ಹಾಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಲು ನೂತನ ಖಾಝಿ ಯವರಿಗೆ ಎಲ್ಲರ ಸಹಕಾರ ಮತ್ತು ಶುಭ ಹಾರೈಕೆಗಳನ್ನು ವ್ಯಕ್ತಪಡಿಸಲಾಯಿತು.