ರಾಜ್ಯಮಟ್ಟದ ಲಾನ್ ಟೆನಿಸ್ ಗೆ ಸರಕಾರಿ ಪ್ರೌಡಶಾಲೆ ಬಡಗ ಎಕ್ಕಾರು ವಿದ್ಯಾರ್ಥಿಗಳ ತಂಡ ಆಯ್ಕೆ
ಬಜಪೆ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ ಮಂಗಳೂರು, ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ಕಟೀಲು ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾಮಟ್ಟದ ಲಾನ್ ಟೆನಿಸ್ ಆಯ್ಕೆ ಟ್ರಯಲ್ಸ್ ನಲ್ಲಿ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನ ನಾಲ್ಕು ವಿದ್ಯಾರ್ಥಿಗಳು ಆಯ್ಕೆ ಯಾಗಿದ್ದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ವಿಭಾಗದಲ್ಲಿ ನಿವೇದ್ ಎಂಟನೇ ತರಗತಿ, 17ರ ವಯೋಮಾನದ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿಗಳಾದ ಸಿಯಾನ್ ಜಸ್ಟಿನ್ ಮಿರಾಂದಾ, ವೈ ಸುಹಾಸ್ ಭಟ್, ಕುಮಾರಿ ರಕ್ಷಾ ಆಯ್ಕೆ ಯಾಗಿದ್ದು ಸೆಪ್ಟೆಂಬರ್ 21ರಂದು ರಾಯಚೂರು ಜಿಲ್ಲೆಯ ಸಿಂಧನೂರು ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಲಾನ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿದ್ಯಾಲತ ಇವರು ತರಬೇತಿಯನ್ನು ನೀಡಿರುತ್ತಾರೆ.