Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ವಾರ್ಷಿಕ ಮಹಾಸಭೆ

ಬಜಪೆ:ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಸಭೆಯು ಬಜಪೆ ಸೈಂಟ್ ಜೋಸೆಫ್ ಚರ್ಚ್ ಹಾಲ್‌ನಲ್ಲಿ ಬ್ಯಾಂಕಿನ ಅಧ್ಯಕ್ಷ ಡೆನಿಸ್ ಡಿ ಸೋಜ  ಅಧ್ಯಕ್ಷತೆಯಲ್ಲಿ ಸೆ. 1 ರ  ಮಂಗಳವಾರ ದಂದು ನಡೆಯಿತು. 


ಸಭೆಯಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ  ಶ್ರೀಮತಿ ಪ್ರೆಸಿಲ್ಲಾ ಪಿರೇರಾ ರವರು  2025-26 ನೇ ಸಾಲಿನ ಆಡಳಿತ ಮಂಡಳಿಯ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು. 
2025-26 ನೇ ಸಾಲಿಗೆ ಬ್ಯಾಂಕಿನ ದುಡಿಯುವ ಬಂಡವಾಳ 633 ಕೋಟಿ ಆಗಿದ್ದು, 18.08 ಕೋಟಿ ರೂ ಗಳ ಲಾಭವನ್ನು ದಾಖಲಿಸಿರುತ್ತದೆ. ಸದಸ್ಯರಿಗೆ 20% ಡಿವಿಡೆಂಟ್ ಘೋಷಿಸಿ ರೂ.8,87,87,430 ಗಳನ್ನು ಪಾಲು ಮುನಾಫೆಯಾಗಿ ವಿತರಿಸುವುದಾಗಿ ಮಹಾಸಭೆಯಲ್ಲಿ ನಿರ್ಣಯಿಸಲಾಯಿತು. ಸದಸ್ಯರು ಬ್ಯಾಂಕಿನ ಪ್ರಗತಿಯ ಬಗ್ಗೆ ಶ್ಲಾಘನೆಗಳನ್ನು ನುಡಿದು ಸಲಹೆ ಸೂಚನೆಗಳನ್ನು ನೀಡಿದರು.

ಬ್ಯಾಂಕಿನ ಉಪಾಧ್ಯಕ್ಷ  ಭಾಸ್ಕರ ಮಲ್ಲಿ , ನಿರ್ದೇಶಕರುಗಳಾದ ಡಾ.ಎಂ.ಎನ್ ರಾಜೇಂದ್ರಕುಮಾರ್,  ವೈ ಮೋನಪ್ಪ ಶೆಟ್ಟಿ,  ರತ್ನಾಕರ ಶೆಟ್ಟಿ,  ರಿತೇಶ್ ಶೆಟ್ಟಿ,  ಸ್ಟೇನಿ ಡಿ ಸೋಜ,  ವಸಂತ,  ಮೊಹಮ್ಮದ್ ಶರೀಪ್, ಶ್ರೀಮತಿ ಗೀತಾ ಕೆ ಅಮೀನ್, ಶ್ರೀಮತಿ ಸವಿತಾ, ಶ್ರೀಮತಿ ಮೀರಾ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಸೂಪರ್ ವೈಸ್ ಕಿರಣ್ ಕುಮಾರ್ ಶೆಟ್ಟಿ,ವೃತ್ತಿಪರ ನಿರ್ದೇಶಕ ಮೋಹನ್  ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಉಪಾಧ್ಯಕ್ಷ ಭಾಸ್ಕರ ಮಲ್ಲಿ  ಸ್ವಾಗತಿಸಿದರು

  ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ  ನಿರೂಪಿಸಿದರು.  ಸುಮಾರು 2000 ಕ್ಕೂ ಮಿಕ್ಕಿದ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.