ಶ್ರೀ ಮದ್ದೇರಿ ದೈವಸ್ಥಾನ ತೋಕೂರು ಅಧ್ಯಕ್ಷರಾಗಿ ತೋಕೂರು ಗುತ್ತು ಹೊಸಮನೆ ಹರಿಪ್ರಸಾದ್ ಜಿ. ಶೆಟ್ಟಿ ಆಯ್ಕೆ
ತೋಕೂರು : ಶ್ರೀ ಮದ್ದೇರಿ ದೈವಸ್ಥಾನ ತೋಕೂರು ಇದರ ಮಹಾಸಭೆಯು ತೋಕೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಪದ್ಮನಾಭ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಲೆಕ್ಕಪತ್ರ ಮಂಡನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. 2026 - 27ನೇ ಸಾಲಿನ ಗೌರವ ಅಧ್ಯಕ್ಷರಾಗಿ ಪದ್ಮನಾಭ ಆಚಾರ್ಯ , ಅಧ್ಯಕ್ಷರಾಗಿ ತೋಕೂರು ಗುತ್ತು ಹೊಸಮನೆ ಹರಿಪ್ರಸಾದ್ ಜಿ. ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹೇಮನಾಥ ಅಮೀನ್, ಮೋಹನ್ ದಾಸ್, ಕಾರ್ಯದರ್ಶಿಯಾಗಿ ಸಂತೋಷ್ ದೇವಾಡಿಗ, ಜೊತೆ ಕಾರ್ಯದರ್ಶಿ ಯಾಗಿ ಅಭಿಷೇಕ್ ಶೆಟ್ಟಿ, ಕೋಶಾಧಿಕಾರಿಯಾಗಿ ಪುರುಷೋತ್ತಮ ಕೋಟ್ಯಾನ್, ಜೊತೆ ಕೋಶಾಧಿಕಾರಿಯಾಗಿ ಜಗದೀಶ್ ಕುಲಾಲ್, ಗೌರವ ಸಲಹೆಗಾರರಾಗಿ ಗುರುರಾಜ್ ಎಸ್ ಪೂಜಾರಿ,ಪ್ರಭಾಕರ್ ರಾವ್ ಕಂಬಳಬೆಟ್ಟು, ಪುರುಷೋತ್ತಮ ಶೆಟ್ಟಿ ಮೂಡುಮನೆ , ಪಂಜ ಬೈಲಗುತ್ತು, ಸಂಪತ್ ಜೆ. ಶೆಟ್ಟಿ ತೋಕೂರು ಗುತ್ತು ಆಯ್ಕೆಯಾದರು.ಈ ವೇಳೆ ನೂತನ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು.
ಪದ್ಮನಾಭ ಆಚಾರ್ಯ ಸ್ವಾಗತಿಸಿದರು, ಪುರುಷೋತ್ತಮ ಕೋಟ್ಯಾನ್ ಲೆಕ್ಕಪತ್ರ ಮಂಡಿಸಿದರು, ಹೇಮನಾಥ ಅಮೀನ್ ಕಾರ್ಯಕ್ರಮ ನಿರೂಪಿಸಿದರು.