Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿ

ಹಳೆಯಂಗಡಿ:ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 17 ರ  ಸೋಮವಾರದಂದು  "ಸಿಂಹ ಸಂಕ್ರಮಣ"ಮತ್ತು "ನಾಗರ ಪಂಚಮಿ"  ನಡೆಯಿತು.ಶ್ರೀ ಸುಬ್ರಹ್ಮಣ್ಯ ದೇವರಿಗೆ ಊರ ಪರವೂರ ಭಕ್ತರ ವತಿಯಿಂದ ಬೆಳಿಗ್ಗೆ ಗಂಟೆ 9.00ಕ್ಕೆ ವಿಶೇಷ ಸಿಯಾಳಭಿಷೇಕ  ವಿಜೃಂಭಣೆಯಿಂದ  ನಡೆಯಿತು. 
ನಾಗರಪಂಚಮಿಯ ಪ್ರಯುಕ್ತ ನಾಗಬನದಲ್ಲಿ ಬೆಳಿಗ್ಗೆ ಗಂಟೆ 6.00ರಿಂದ ಪಂಚಾಮೃತ ಅಭಿಷೇಕ,ನಾಗತಂಬಿಲ ಸೇವೆಗಳು ನಡೆಯಿತು,ಬೆಳಿಗ್ಗೆ ಗಂಟೆ 11.00 ರಿಂದ ನಾಗದೇವರಿಗೆ ವಿಶೇಷ ಸಿಯಾಳಭಿಷೇಕ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ ಮಧ್ಯಾಹ್ನ ಗಂಟೆ 1.00ರಿಂದ ಮಹಾ ಅನ್ನ ಸಂತರ್ಪಣೆ  ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ  ಟಿ. ಮಧುಸೂದನ್ ಆಚಾರ್ಯ , ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ  ಗುರುರಾಜ. ಎಸ್ .ಪೂಜಾರಿ, ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಅಶೋಕ್ ಕುಂದರ್, ತೋಕೂರು ಗುತ್ತು ಸಂಪತ್ ಶೆಟ್ಟಿ, ಸವಿತಾ ಶರತ್ ಬೆಳ್ಳಾಯರ್, ಶೋಭಾ ಅಂಚನ್, ಭಾಸ್ಕರ್ ದೇವಾಡಿಗ, ವಿಶ್ವನಾಥ್,  ದೇವಳದ ನಿಕಟಪೂರ್ವ ಅಧ್ಯಕ್ಷ ಹರಿದಾಸ್ ಭಟ್, ಪುರುಷೋತ್ತಮ್ ರಾವ್, ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಊರಿನ ಭಕ್ತರು ಉಪಸ್ಥಿತರಿದ್ದರು.