ಸೂರಿಂಜೆ:ಶಾಲೆಯಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ವೇಳೆ ವಿದ್ಯಾರ್ಥಿ ಕುಸಿದು ಬಿದ್ದು ಸಾವು
ಕಿನ್ನಿಗೋಳಿ: ಶಾಲೆಯಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಸುರತ್ಕಲ್ ಸಮೀಪದ ಸೂರಿಂಜೆಯ ಶಾಲೆಯೊಂದರಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ನಿಖಿತ್ ಎಂ ಅಮೀನ್ ಎಂದು ಗುರುತಿಸಲಾಗಿದೆ.
ಸೂರಿಂಜೆಯ ಶಾಲೆಯೊಂದರಲ್ಲಿ 10 ನೇ ತರಗತಿ ಕಲಿಯುತ್ತಿದ್ದ ನಿಖಿತ್ ಬುಧವಾರ ಸಂಜೆ ಶಾಲೆಯ ಮುಂಭಾಗ ಮೈದಾನದಲ್ಲಿ ವಾಲಿಬಾಲ್ ಆಟ ಆಡುವ ಸಂದರ್ಭ ಕುಸಿದು ಬಿದ್ದಿದ್ದು ಕೂಡಲೇ ಸುರತ್ಕಲ್ ನ ಖಾಸಗಿ ಅಸ್ಪತ್ರಗೆ ಸಾಗಿಸಲಾಗಿದೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಖಿತ್ ಮೃತಪಟ್ಟಿದ್ದಾರೆ.