Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

79 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಂತಿಪಲ್ಕೆಯ ಗ್ರಾಮಸ್ಥರಿಗೆ ಕ್ರೀಡಾಕೂಟ

ಕಿನ್ನಿಗೋಳಿ: 79 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಂತಿಪಲ್ಕೆಯ ಗ್ರಾಮಸ್ಥರಿಗೆ  ಶಾಂತಿಪಲ್ಕೆಯ ಮೈದಾನದಲ್ಲಿ 4 ನೇ ವರ್ಷದ ಕ್ರೀಡಾಕೂಟ ನಡೆಯಿತು.
ತಾಳಿಪಾಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ದಯಾನಂದ ಭಟ್ ದೀಪ ಬೆಳಗಿಸಿ ಕ್ರೀಡಾಕೂಟ  ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕೌನ್ಸಿಲರ್ ಶ್ರೀಮತಿ ಸುನೀತಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕೌನ್ಸಿಲರ್ ಸಂತಾನ್ ಡಿ'ಸೋಜ, ಪ್ರಕಾಶ್ ಆಚಾರ್ಯ,ಐಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಚೌಟ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪೂಜಾರಿ,ತಾಳಿಪಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಕುಶಲ ಪೂಜಾರಿ,ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಮೇಲ್ವಿಚಾರಕಿ ಶ್ರೀಮತಿ ಗೀತಾ,ಜಯ ಅಮೀನ್,ಶ್ರೀಸ ಸರಾಪ್ ಐಕಳ, ಹರೀಶ್ ಸಾಲ್ಯಾನ್ ತೇರೆಗುರಿ, ಚೈತನ್ಯ ಭಟ್, ಶ್ರೀಮತಿ ಪ್ರೇಮಾ ಆಚಾರ್ಯ,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪ್ರೇಮಾ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ,ಓಮಯ್ಯ ಗುರಿಕಾರ,ಶೀನ, ಸಂಘಟಕರಾದ ಧೀರಾಜ್ ಶೆಟ್ಟಿ, ಮನೋಜ್, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸದಾಶಿವ ನಾಯ್ಕ್ ಸ್ವಾಗತಿಸಿ, ಸಂತೋಷ್ ಕುಮಾರ್ ನಿರೂಪಿಸಿ ವಂದಿಸಿದರು.