ಪೆರ್ಮುದೆಯಲ್ಲಿ ಸಾಕುನಾಯಿಯನ್ನೇ ಹೊತ್ತೊಯ್ದ ಚಿರತೆ
ಬಜಪೆ:ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇನವಕೋಡಿ ಪರಿಸರದಲ್ಲಿ ಚಿರತೆ ಹಾವಳಿ ಕಂಡುಬಂದಿದ್ದು,ಗ್ರಾಮಸ್ಥರನ್ನು ಭಯಭೀತಗೊಳಿಸಿದೆ. ಭಾನುವಾರ ತಡರಾತ್ರಿ ನೋಣ
ಯ್ಯ ಜಿ.ಕೆ ಎಂಬುವವರ ಮನೆಯ ಸಾಕು ನಾಯಿಯನ್ನು ಹೊತ್ತೊಯ್ದಿದೆ.ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯವು ಮನೆಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.ಪೆರ್ಮುದೆ ಗ್ರಾಮ ಪಂಚಾಯತ್ ನಿಂದ ಈಗಾಗಲೇ ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.ಅರಣ್ಯಾಧಿಕಾರಿಗಳಿಗೆ ಪರಿಸರದಲ್ಲಿ ಚಿರತೆಯ ಸೆರೆಗಾಗಿ ಬೋನು ಇಡಲು ತಿಳಿಸಿದ್ದಾರೆ.
ಚಿರತೆ ಸಂಚಾರದಿಂದಾಗಿ ಮಕ್ಕಳು ಹಾಗೂ ಸಾರ್ವಜನಿಕರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆಯ ಚಲನವಲನದ ಬಗ್ಗೆ ನಿಗಾ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿರತೆ ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.