Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಾವಂಜೆಯಲ್ಲಿ ಮಾದಕ ವಸ್ತು ಸೇವನೆ ವ್ಯಕ್ತಿ ಪೊಲೀಸ್‌ ವಶಕ್ಕೆ

ಮುಲ್ಕಿ:ಪೊಲೀಸ್‌ ಠಾಣಾ ವ್ಯಾಪ್ತಿಯ ಪಾವಂಜೆ ಗ್ರಾಮದ ಪಾವಂಜೆ  ಸೇತುವೆ  ಬಳಿ  ಮುಲ್ಕಿ ಪೊಲೀಸ್‌ ಠಾಣಾ ಉಪ ನಿರೀಕ್ಷಕ ರಾಘವೇಂದ್ರ ಎಂ ನಾಯ್ಕ್ ರವರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಓರ್ವ ವ್ಯಕ್ತಿಯು ನಿಂತುಕೊಂಡು ಸಿಗರೇಟ್ ಸೇದುತ್ತಾ  ನಶೆಯಲ್ಲಿದ್ದಂತೆ ಕಂಡು ಬಂದಿದ್ದು,  ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಅಬ್ಬಾಸ್  ಅಲಿಯಾಸ್‌  ಜೋಕರ್ ಅಬ್ಬಾಸ್ ಎಂದು ತಿಳಿಸಿದ್ದಾನೆ 
ಆತ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡು ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು
ಆತನ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ಕಂಡು ಬಂದಿದೆ.ಆರೋಪಿಯ ವಿರುದ್ದ ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.