ಪಂಜ ಕೊಯಿಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ, ವಾರ್ಷಿಕ ಸಾಮಾನ್ಯ ಸಭೆ
ಪಕ್ಷಿಕೆರೆ:ಪಂಜ ಕೊಯಿಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾ ಭವನದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನವೀನ್ ಶೆಟ್ಟಿ ಅವರು ಹಾಲು ಉತ್ಪಾದಕರ ಸಹಕಾರಿ ಸಂಘವು ಗ್ರಾಮೀಣ ಭಾಗದ ಹೈನುಗಾರ ರೈತರ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯಾಗಿದೆ. ಪಂಜ ಸಹಕಾರ ಸಂಘಕ್ಕೆ ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಎ ಗ್ರೇಡ್ ಮಾನ್ಯತೆಯನ್ನು ನೀಡಿದೆ.
ಸಂಘವು ಗ್ರಾಹಕರಿಗೆ 20 ಶೇ ಡಿವಿಡೆಂಟ್ ಘೋಷಣೆಯನ್ನು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಉಪ ನಿರ್ದೇಶಕ ಜೋನೆಟ್ ರೋಸರಿಯ ಮಾತನಾಡಿ ಮನುಷ್ಯನ ಬದುಕಿಗೆ ಅನ್ನ ಎಷ್ಟು ಅಗತ್ಯವೋ, ಹಾಲು ಮತ್ತು ಹಾಲಿನ ಉತ್ಪನ್ನಗಳೂ ಅಷ್ಟೇ ಅಗತ್ಯ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃಷಿಕನ ಶ್ರಮ ಮತ್ತು ಹೈನುಗಾರಿಕೆಯ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ ಎಂದರು.
ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ಶ್ರೀ ಮತಿ ಸರೋಜಿನಿ ಅವರು ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಷಣ್ಮುಖಂ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಸತೀಶ್ . ಜೆ. ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ದೇವಾಡಿಗ, ಚಂದ್ರಹಾಸ್ .ಎಂ. ಶೆಟ್ಟಿ, ಸತೀಶ್ .ಎಂ. ಶೆಟ್ಟಿ, ಹರೀಶ್ ಕುಮಾರ್, ರಾಜೇಶ್ ಶೆಟ್ಟಿ, ಮೀರಾ, ಉಷಾ, ವೇದಾವತಿ, ರೇಷ್ಮಾ ಕೃಷಿ ಅಧಿಕಾರಿ ಶ್ರೀನಿವಾಸ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು
ಸಂಘದ ಕಾರ್ಯ ನಿರ್ವಹಣಾ ಅಧಿಕಾರಿ ಜಗದೀಶ್ ಶೆಟ್ಟಿ ವಾರ್ಷಿಕ ವರದಿ ಹಾಗೂ 2025 -26 ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು.
ಕಾರ್ಯಕ್ರಮದಲ್ಲು ಕೃಷಿ ಅಧಿಕಾರಿಗಳಾದ ಷಣ್ಮುಕ, ಶ್ರೀನಿವಾಸ್,
ಜಿಲ್ಲಾ ಉಪ ನಿರ್ದೇಶಕ ಜೋನೆಟ್ ರೋಸರಿಯ,ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ಶ್ರೀ ಮತಿ ಸರೋಜಿನಿ ಹಾಗೂ
ಅಮಿತಾ ಭವಾನಿ ಶಂಕರ್ ಅವರ ಸುಪುತ್ರಿ ಬಿಎಸ್ಸಿ ಪದವಿಯಲ್ಲಿ ಶೇ (97.38)ಪಡೆದ ದ್ವಿಷಾ ದೇವಾಡಿಗ ಪಂಜ ಅವರನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕ ಸತೀಶ್ ಎಂ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಹಾಲು ಪರೀಕ್ಷಕ ಅಮಿತಾ ಧನ್ಯವಾದವಿತ್ತರು.