ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭೆ ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯೋಜಕರಾಗಿ ಹೆಚ್.ವಸಂತ್ ಬೆರ್ನಾರ್ಡ್ ನೇಮಕ
ಮೂಲ್ಕಿ: ಕೆಪಿಸಿಸಿ ಸದಸ್ಯರಾಗಿರುವ ಎಚ್. ವಸಂತ ಬೆರ್ನಾರ್ಡ್ ಅವರನ್ನು ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭೆ ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯೋಜಕರಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇಮಕ ಮಾಡಿ ಆದೇಶಿಸಿದ್ದಾರೆ. ಬೆರ್ನಾರ್ಡ್ 2021 - 22ನೇ ಸಾಲಿನಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು, ಈಗ ಮತ್ತೊಮ್ಮೆ ಹರಿಪ್ರಸಾದ್ ಜವಾಬ್ದಾರಿ ನೀಡಿದ್ದಾರೆ. ಕೆಪಿಸಿಸಿ ಸದಸ್ಯರಾಗಿ, ಕೆಪಿಸಿಸಿ ಸಂಯೋಜಕರಾಗಿ ಮತ್ತು ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.