ಮುಲ್ಕಿ: ಸಂಭ್ರಮದ ಈದ್ ಮಿಲಾದ್ ಹಬ್ಬಆಚರಣೆ
ಮುಲ್ಕಿ: ಪರಿಸರದಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಸಂಭ್ರಮದಿಂದ ನಡೆಯಿತು
ಮುಲ್ಕಿ ಶಾಫಿ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು
ಮುಲ್ಕಿ ಶಾಫಿ ಜುಮ್ಮಾ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು
ಮುಲ್ಕಿ ಕೇಂದ್ರ ಶಾಫಿ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಇನಾಯತ್ ಆಲಿ ಮಾತನಾಡಿ ಪವಿತ್ರ ಈದ್ ಮಿಲಾದ್ ಹಬ್ಬವು ರಾಷ್ಟ್ರದಲ್ಲಿ ಉತ್ತಮ ಸ್ನೇಹ ಹಾಗೂ ಸೌಹಾರ್ದತೆಯನ್ನು ಬೆಳೆಸಲಿ ಎಂದರು
ಮುಲ್ಕಿ ಕೇಂದ್ರ ಶಾಫಿ ಜುಮ್ಮಾ ಮಸೀದಿಯ ಖತೀಬರಾದ ಉಸ್ಮಾನುಲ್ ಫೈಝೀ ತೋಡಾರ್, ಕಾರ್ನಾಡ್ ಮಸೀದಿಯ ಖತೀಬರಾದ ರಿಯಾಝ್ ಫೈಝೀ,ಸಹಾಯಕ ಖತೀಬ ಖಲೀಲ್ ದಾರೀಮಿ
ಮಸೀದಿಯ ಅಧ್ಯಕ್ಷ ಸೊಹೈಲ್ ಹೈದರ್ ಎಂ.ಕೆ.,
ಕೋಶಾಧಿಕಾರಿ ಇಕ್ಬಾಲ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಫಾರೂಕ್,
ಉಪಾಧ್ಯಕ್ಷರಾದ ಲಿಯಾಕತ್ ಆಲಿ, ಪುತ್ತು ಬಾವ ,ಅಬ್ದುಲ್ ರಹಿಮಾನ್ ಸಅದಿ , ಅಶ್ರಫ್ ಅಜೆರಿ,, ಅಬ್ದುಲ್ ರಹಿಮಾನ್ ಆರ್ಷದಿ,, ಹಂಝ ಹನೀಫ್,ಬಷೀರ್ ಮೌಲ್ವಿ ಮತ್ತಿತರು ಉಪಸ್ಥಿತರಿದ್ದರು
ಮುಲ್ಕಿ ಪರಿಸರದ ಹಳೆಯಂಗಡಿ, ಪಕ್ಷಿಕೆರೆ, ಕಿನ್ನಿಗೋಳಿ, ಕರ್ನೀರೆ, ಬಳ್ಕುಂಜೆ,ಪುನರೂರು, ಅಂಗನಗುಡ್ಡೆ ಮಸೀದಿಗಳಲ್ಲಿ ಈದ್ ಮಿಲಾದ್ ಹಬ್ಬ ಸಂಭ್ರಮದಿಂದ ನಡೆಯಿತು ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡರು