Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ ವಿವಿಧ ಸಂಘಟನೆಗಳಿಂದ ಶಿಮಂತೂರು ರಸ್ತೆ ತಾತ್ಕಾಲಿಕ ದುರಸ್ತಿ

ಮುಲ್ಕಿ: ಮುಲ್ಕಿಯಿಂದ ಶಿಮಂತೂರು ದೇವಸ್ಥಾನ  ಸಂಪರ್ಕ ರಸ್ತೆ ಸೂಕ್ತ  ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದು ಹೋಗದೆ ರಸ್ತೆ ಹೋಂಡಮಯವಾಗಿ ವಾಹನ ಸಂಚಾರ ದುಸ್ತರವಾಗಿತ್ತು 
ಈ ಬಗ್ಗೆ ಅನೇಕ ಬಾರಿ ಸಂಬಂಧ ಪಟ್ಟ ಪಂಚಾಯತ್ ಆಡಳಿತಕ್ಕೆ ಮನವಿ ಸಲ್ಲಿಸಿದರೂ ದುರಸ್ತಿಯಾಗದೆ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು 
 ಕೂಡಲೇ ಕಾರ್ಯಪ್ರವೃತ್ತರಾದ ಶಿಮಂತೂರು
ಯುವಕ ಮಂಡಲ ಹಾಗೂ ರೋಟರಿ ಗ್ರಾಮೀಣ ದಳ ಮತ್ತು ಮಹಿಳಾ ದ್ವಿಚಕ್ರ ವಾಹನ ಸವಾರರು ಸೇರಿ ಶಿಮಂತೂರು ದ್ವಾರದಿಂದ ಶಿಮಂತೂರು ದೇವಸ್ಥಾನದ ವರೆಗಿನ ರಸ್ತೆಯ ಹೊಂಡ ತಾತ್ಕಾಲಿಕ ಮುಚ್ಚುವ ಕಾರ್ಯ ನಡೆಸಿದರು
ಅಪಾಯಕಾರಿ ಹೊಂಡಗಳನ್ನು ಮುಚ್ಚಿ ವಾಹನ ಸಂಚಾರ ಸುಗಮಗೊಳಿಸಿದ ಸೇವಾ ಸಂಸ್ಥೆಗಳ ಕಾರ್ಯಕ್ಕೆ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ
ಹೊಂಡಕ್ಕೆ ಬೇಕಾಗುವ ಮುರ ಕಲ್ಲಿನ ಹುಡಿಯನ್ನು ಶ್ರೀ ಆದಿ ಜನಾರ್ದನ ಟ್ರಾನ್ಸ್ಪೋರ್ಟ್ ನವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿತ್ತು.