Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ರೈಲ್ವೇ ನಿಲ್ದಾಣ ರಸ್ತೆ ಬಳಿ ಸರಕಾರಿ ಜಾಗ ಅತಿಕ್ರಮಣ ನಡೆಸಿ ಕಾಮಗಾರಿ-ವಿದ್ಯುತ್ ಸಂಪರ್ಕ ನೀಡುವಾಗ ಪರಿಶೀಲಿಸಿಮೆಸ್ಕಾಂ ಜನಸಂಪರ್ಕ ಸಭೆ

ಮುಲ್ಕಿ: ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿಯ ಮುಲ್ಕಿ ಉಪ ವಿಭಾಗದ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ  ಸಭೆ ಕಾರ್ನಾಡ್ ಮೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆಯಿತು. 
ಸಭೆಯಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಮಾತನಾಡಿ ಪಡುಪಣಂಬೂರು ಗ್ರಾ ಪಂ ವ್ಯಾಪ್ತಿಯ ಬೆಳ್ಳಾಯರು ಮಾಂಟ್ರಾಡಿ, ಬೆಳ್ಳಾಯರು ಎಸ್ ಸಿ ಕಾಲೋನಿಯಲ್ಲಿ  ವಿದ್ಯುತ್ ಕಂಬ ಅಪಾಯಕಾರಿಯಾಗಿ ವಾಲಿದ ಸ್ಥಿತಿಯಲ್ಲಿದ್ದು ಕೂಡಲೇ ತೆರವುಗೊಳಿಸಬೇಕು ಹಾಗೂ ಕೆರೆಕಾಡು ಘನತ್ಯಾಜ್ಯ ಘಟಕದ ಬಳಿ ಟ್ರಾನ್ಸ್ಫಾರ್ಮರ್ ನಲ್ಲಿ ಸಮಸ್ಯೆ ಇದ್ದು ನಿವಾರಿಸಿ ಎಂದು ಆಗ್ರಹಿಸಿದರು 
ಕಿನ್ನಿಗೋಳಿ ಮೆಸ್ಕಾಂ ನ ಎಳತ್ತೂರು ಫೀಡರ್ ನಲ್ಲಿ ಪ್ರತಿ ಬಾರಿ ತಾಂತ್ರಿಕ ದೋಷ ಕಾಣುತ್ತಿದ್ದು ದುರಸ್ತಿಪಡಿಸಬೇಕು ಹಾಗೂ ಕೊಲ್ಲೂರು ಬಹುಗ್ರಾಮ ನೀರಿನ ಯೋಜನೆಯಿಂದ ನೀರು ಸರಬರಾಜಾಗುವ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜೀ ಸದಸ್ಯ ಚಂದ್ರಶೇಖರ್ ಗೋಳಿಜೋರಾ ಹೇಳಿದರು
ಪ್ರಶ್ನೆಯೊಂದಕ್ಕೆ ಮಂಗಳೂರು ಮೆಸ್ಕಾಂ ಇಂಜಿನಿಯರ್ ಅಧೀಕ್ಷಕ ಕೃಷ್ಣರಾಜ ಮಾತನಾಡಿ  ಕಳೆದ ದಿನಗಳ ಹಿಂದೆ ಬೀಸಿದ ಗಾಳಿ ಮಳೆಗೆ ತಾಲೂಕು   ವ್ಯಾಪ್ತಿಯ ಹಳೆಯಂಗಡಿ,ಮುಲ್ಕಿ,ಕಿನ್ನಿಗೋಳಿ  ಮೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು201 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು 24 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದರು ಕುಡಿಯುವ ನೀರಿನ ಜೆಜೆಎಂಗೆ ಜಿಲ್ಲಾ ವ್ಯಾಪ್ತಿಯಲ್ಲಿ ಮೆಸ್ಕಾಂ ನಿಂದ  ವಿಧ್ಯುತ್ ಸಂಪರ್ಕ ನೀಡಲಾಗಿದೆ ಎಂದರು
ಕಿಲ್ಪಾಡಿ ಗ್ರಾಮ ಪಂಚಾಯತ್ ಮಾಜೀ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ಕಿಲ್ಪಾಡಿ ಕೊರಗರ ಕಾಲೋನಿಯಲ್ಲಿ ಚರಂಡಿಯಲ್ಲಿದ್ದ ವಿದ್ಯುತ್ ಕಂಬ ತೆರವುಗೊಳಿಸಲಾಗಿದೆ, ಪರಿಸರದಲ್ಲಿ ಟ್ರೀ ಕಟಿಂಗ್ ನಡೆಸಲಾಗಿದೆ ಎಂದು ಹೇಳಿ ಮೆಸ್ಕಾಂ ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು.
ಮುಲ್ಕಿ  ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪ ಉರಿಯುತ್ತಿಲ್ಲ, ಟೋಲ್ ಕಟ್ಟಿದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆದ್ದಾರಿ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಗ್ರಾಹಕರೊಬ್ಬರು ದೂರಿದರು 
ಮುಲ್ಕಿ ರೈಲ್ವೇ ನಿಲ್ದಾಣದ ಬಳಿ ಸರಕಾರಿ ಜಾಗ ಅತಿಕ್ರಮಣ ನಡೆಸಿ ಲೇಔಟ್ ಕಾಮಗಾರಿ ನಡೆಯುತ್ತಿದ್ದು ,ಕಾಮಗಾರಿ ನಡೆಯುವ ಸ್ಥಳ  ಬೆಳ್ಳಾಯರು ಹಾಗೂ ಕಿಲ್ಪಾಡಿ ಗ್ರಾಮಕ್ಕೆ ಸೇರುತ್ತಿದ್ದು ಯಾವುದೇ ಕಾರಣಕ್ಕೂ ಪರಿಶೀಲನೆ ನಡೆಸದೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ವಿನೋದ್ ಸಾಲ್ಯಾನ್ ಬೆಳ್ಳಾಯರು ಹೇಳಿದರು 
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗೃಹ ಜ್ಯೋತಿಯಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸುತ್ತೇವೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಲ್ವಿನ್ ಪಕ್ಷಿಕೆರೆ ಪ್ರಶ್ನೆಯೊಂದಕ್ಕೆ  ಉತ್ತರಿಸಿದರು 
ತಾಲೂಕು ವ್ಯಾಪ್ತಿಯ ಪಕ್ಷಿಕೆರೆ ಹಾಗೂ ಪಂಜದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಬಗ್ಗೆ ಮೆಸ್ಕಾಂ ಇಲಾಖೆ ಮುತುವರ್ಜಿ ವಹಿಸಿ ಸರಿಪಡಿಸಿದ್ದಕ್ಕೆ ಮೆಸ್ಕಾಂ ಇಲಾಖೆಗೆ ಗ್ರಾಮಸ್ಥ ಬಾಲಕೃಷ್ಣ ಶೆಟ್ಟಿಗಾರ್ ಅಭಿನಂದನೆ ಸಲ್ಲಿಸಿದರು ಅವರು ಮಾತನಾಡಿ ಕಿನ್ನಿಗೋಳಿ ಮೆಸ್ಕಾಂ ನಲ್ಲಿ ಸಬ್ ಡಿವಿಜನ್ ಬೇಕು ಎಂದು ಆಗ್ರಹಿಸಿದರು
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷ್ಣರಾಜ್ ಇಲಾಖೆಗೆ ಸೂಚನೆ ನೀಡಿದರು 
ಸಭೆಯಲ್ಲಿ ಅನಿತಾ ಅರಾಹ್ನ ಕಿನ್ನಿಗೋಳಿ, ದಿನೇಶ್ಚಂದ್ರ ಅಜಿಲ  ಪಂಜಿನಡ್ಕ ಮತ್ತಿತರರು ಮೆಸ್ಕಾಂ ಸಮಸ್ಯೆ ಬಗ್ಗೆ ಮಾತನಾಡಿದರು
ವೇದಿಕೆಯಲ್ಲಿ ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ಧರ್ಮಾನಂದ ಶೆಟ್ಟಿಗಾರ್ ಕಾರ್ಯನಿರ್ವಾಹಕ ಇಂಜಿನಿಯರ್ ಅಭಿಷೇಕ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಕೃಷ್ಣ ಐತಾಳ, ಎಇ ಟೆಕ್ನಿಕಲ್ ಉಪೇಂದ್ರ,  ಮತ್ತಿತರರು ಉಪಸ್ಥಿತರಿದ್ದರು