ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು - ವೇ.ಮೂ. ಶ್ರೀಪತಿ ಉಪಾಧ್ಯಾಯ
ಮುಲ್ಕಿ:ಸಂಸ್ಕೃತವು ಕೇವಲ ಭಾಷೆಯಲ್ಲ ಅದು ಭಾರತದ ಸಂಸ್ಕೃತಿ ಮತ್ತು ಜ್ಞಾನದ ಅಮೂಲ್ಯ ನಿಧಿ ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಶ್ರೀಪತಿ ಉಪಾಧ್ಯಾಯ ಹೇಳಿದರು
ಅವರು ಮುಲ್ಕಿ ವಿಜಯ ಕಾಲೇಜಿನಲ್ಲಿ ನಡೆದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದ ದೀಪ ಬೆಳಗಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪದವಿ ವಿಭಾಗದ ಪ್ರಾಂಶುಪಾಲರಾದ ಡಾ ಶೈಲಜಾ ವೈ ವಿ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಸೋಂದಾ ಭಾಸ್ಕರ್ ಭಟ್ ಮಾತನಾಡಿ ಸಂಸ್ಕೃತ ಭಾಷೆಯ ಮಹತ್ವ ಹಾಗೂ ಪ್ರಸ್ತುತತೆಯ ಬಗ್ಗೆ ಉಪನ್ಯಾಸ ನೀಡಿ ಅಕ್ಷರಗಳಲ್ಲಿ ಸೌಂದರ್ಯ, ಪದಗಳಲ್ಲಿ ಪಾವಿತ್ರ್ಯ, ಅರ್ಥದಲ್ಲಿ ಜ್ಞಾನ, ಇದೇ ಸಂಸ್ಕೃತ . ಸಂಸ್ಕೃತದ ಅಧ್ಯಯನವು ಜ್ಞಾನದೆಡೆಗೆ ತೆರೆದುಕೊಳ್ಳುವ ಸುಂದರ ಬಾಗಿಲು ಎಂದರು
ವೇದಿಕೆಯಲ್ಲಿ ಪದವಿ ಪೂರ್ವ ಪ್ರಾಂಶುಪಾಲ ಪ್ರೊ. ಅರುಣ್ ಕುಮಾರ್, ಎಸ್ ಡಬ್ಲ್ಯೂಒ ಶರ್ಮಿಳಾ ರಾಜೇಶ್, ಐಕ್ಯೂಎಸಿ ಸಂಯೋಜಕ ಪ್ರೊ. ದೇವದಾಸ್ ಕೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು ಹಾಗೂ ಸಂಸ್ಕೃತ ದಲ್ಲಿ ಅತ್ಯಧಿಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು . ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಧನರಾಜ್ ಶೆಟ್ಟಿಗಾರ್ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ಶ್ರೀಕರ ಉಪಾಧ್ಯಾಯ ವಂದಿಸಿದರು. ವಿದ್ಯಾರ್ಥಿನಿ ವಿನಯ ಕುಡ್ವ ಕಾರ್ಯಕ್ರಮ ನಿರೂಪಿಸಿದರು.