ಮುಲ್ಕಿ:ಕೊಂಕಣಿ ಭಾಷೆ ನಮ್ಮ ಹೃದಯದಲ್ಲಿರಬೇಕು.-ಫಾ. ಆ್ಯಂಟನಿ ಶೇರಾ
ಮುಲ್ಕಿ: ಕೊಸೆಸಾಂವ್ ಚರ್ಚ್ ಮತ್ತು ಮಾಂಡ್ ಸೊಭಾಣ್ ಸಹಯೋಗದೊಂದಿಗೆ 35 ನೇ ವರ್ಷದ ಕೊಂಕಣಿ ಮಾನ್ಯತಾ ದಿವಸ್-2026 ಕಾರ್ಯಕ್ರಮ ಮುಲ್ಕಿ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆಯಿತು
ಕಾಯುಕ್ರಮವನ್ನು ಕಾರ್ನಾಡ್ ಕೊಸೆಸಾಂವ್ ಚರ್ಚ್ ನ ಧರ್ಮ ಗುರು ಫಾದರ್ ಆ್ಯಂಟನಿ ಶೇರಾ ರವರು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿ ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳ್ಳುವ ಮೂಲಕ ಕೊಂಕಣಿ ಭಾಷೆ ಅಧಿಕೃತ ಸ್ನಾನ ಸ್ಥಾನಮಾನ ಪಡೆಯಿತು ಕೊಂಕಣಿ ಭಾಷೆ ನಮ್ಮ ಹೃದಯದಲ್ಲಿರಬೇಕು. ಯುವ ಜನಾಂಗ ಕೊಂಕಣಿ ಭಾಷೆಗೆ ಮತ್ತಷ್ಟು ಒತ್ತು ಕೊಟ್ಟು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಂಡ್ ಸೊಭಾಣ್ ನ ಮಾಜೀ ಕಾರ್ಯದರ್ಶಿ ಕಿಶೋರ್ ಫೆರ್ನಾಡಿಸ್ ಉಪ್ಪಿನಂಗಡಿ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜಾ,ಕಾರ್ಯದರ್ಶಿ ಸುರೇಶ್ ಪಿರೇರಾ, ಚರ್ಚ್ ನ 21 ಆಯೋಗದ ಸಂಯೋಜಕ ರೋಲ್ಪಿ ಡಿಕೋಸ್ಟ,,ಐ ಸಿ ವೈ ಎಂ ಅಧ್ಯಕ್ಷ ಜಸ್ಟನ್ ಡಿಸೋಜಾ, ಮತ್ತಿತರು ಉಪಸ್ಥಿತರಿದ್ದರು
ಜೇಮ್ಸ್ ಪೀಟರ್ ಡಿಸೋಜಾ ಸ್ವಾಗತಿಸಿದರು,ಸುರೇಶ್ ಪಿರೇರಾ ಧನ್ಯವಾದ ಅರ್ಪಿಸಿದರು, ಲವೀಶಾ ಡಿ ಅಲ್ಮೇಡ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕೊಂಕಣಿ ಭಾಷೆ ಉನ್ನತಿಗೆ ಶ್ರಮಿಸಿದ ಫ್ರಾನ್ಸಿಸ್ ಡಿಕುನ್ನ ರವರನ್ನು ಗೌರವಿಸಲಾಯಿತು.