Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ಮುಲ್ಕಿ: ಅಕ್ರಮ ಮಧ್ಯ ಮಾರಾಟ ನಿಯಂತ್ರಣ-ಎಸ್ಸಿ ಎಸ್ಟಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಭೆಯಲ್ಲಿ ಒತ್ತಾಯ,ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಕುಂದುಕೊರತೆ ಸಮಿತಿ ಸಭೆ

ಮುಲ್ಕಿ; ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮುಲ್ಕಿ ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಕುಂದುಕೊರತೆ ಸಮಿತಿ ಸಭೆ ತಾಲೂಕು ಆಡಳಿತ ಪ್ರಜಾಸೌಧದಲ್ಲಿ ತಾಲೂಕು ತಹಶಿಲ್ದಾರ್ ಪೃಥ್ವೀ ಸಾನಿಕಂ ಅಧ್ಯಕ್ಷತೆಯಲ್ಲಿ ನಡೆಯಿತು 
ಸಭೆಯಲ್ಲಿ ಗ್ರಾಮಸ್ಥ ಸದಾಶಿವ ಮಾತನಾಡಿ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಯವರಿಗೆ ಮನೆ ನಿರ್ಮಾಣಕ್ಕಾಗಿ ಜಾಗ ನೀಡಿದ್ದು , ಬೀದಿ ದೀಪದ ವ್ಯವಸ್ಥೆ ಇಲ್ಲದಿರುವುದರಿಂದ ಕಳೆದ 25 ವರ್ಷಗಳಿಂದ ಮನೆ ಕಟ್ಟಲು ಸಾಧ್ಯವಾಗಿಲ್ಲ ಕೂಡಲೇ ಈ ಬಗ್ಗೆ ಗಮನಹರಿಸಲು ಅವರು ಒತ್ತಾಯಿಸಿದರು 
ಅವರು ಮಾತನಾಡಿ  ತೋಕೂರು ಲೈಟ್ ಹೌಸ್ ಬಳಿ ಸಮುದಾಯ ಭವನದ ಕಾಮಗಾರಿ ಅರ್ಧದಲ್ಲಿ ನಿಂತಿದ್ದು ಕಾಮಗಾರಿ ಪೂರ್ತಿ ಗೊಳಿಸಲು ಒತ್ತಾಯಿಸಿದರು 
ಈ ಬಗ್ಗೆ ಮುಲ್ಕಿ ತಾಲೂಕು ತಹಶಿಲ್ದಾರ್ ಪೃಥ್ವೀ ಸಾನಿಕಂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು 
ನಾಗರಿಕ ಸಚ್ಚಿದಾನಂದ ಗೇರುಕಟ್ಟೆ ಮಾತನಾಡಿ ಗೇರುಕಟ್ಟೆಯಿಂದ ಮುಲ್ಕಿ ವೆಂಕಟರಮಣ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ , ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹಲವಾರು ವರ್ಷಗಳಿಂದ ಕೆಟ್ಟು ಹೋಗಿದ್ದು ದುರಸ್ತಿಪಡಿಸಲು ಮನವಿ ನೀಡಿದರೂ ಇದುವರೆಗೂ ದುರಸ್ತಿಯಾಗಿಲ್ಲ, ಈ ಭಾಗದಲ್ಲಿ ಹಲವಾರು ಶಾಲಾ ಕಾಲೇಜುಗಳಿದ್ದು ಮಕ್ಕಳಿಗೆ ವಾಹನ ಸವಾರರಿಗೆ ಓಡಾಡಲು ತೀವ್ರ ತೊಂದರೆಯಾಗಿದೆ ಎಂದರು 
ಅವರು ಮಾತನಾಡಿ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಅಮೃತಾನಂದಮಯಿ ನಗರದ ಅಂಬೇಡ್ಕರ್ ಭವನ ಮಳೆಗಾಲದಲ್ಲಿ ಸೋರುತ್ತಿದೆ. ಅಂಬೇಡ್ಕರ್ ಭವನದಲ್ಲಿ ಅಂಗನವಾಡಿ ಕೂಡ ಇದ್ದು ಮಕ್ಕಳು ಅಪಾಯದ ಸ್ಥಿತಿಯಲ್ಲಿದ್ದಾರೆ ಅಂಗನವಾಡಿಯನ್ನು ಸ್ಥಳಾಂತರಿಸಿ ಎಂದರು. 
ಅಮೃತಾನಂದಮಯಿ ನಗರದಲ್ಲಿ ಸುಮಾರು ಹಿಂದುಳಿದ ವರ್ಗಗಳ  86 ಮನೆಗಳು ಅಪಾಯದ ಸ್ಥಿತಿಯಲ್ಲಿದೆ, ಈ ಭಾಗದ ಕಾಂಕ್ರೀಟ್ ರಸ್ತೆಗಳು ಮಳೆಗಾಲದಲ್ಲಿ ಪಾಚಿ ಹಿಡಿದಿದ್ದು ವಾಹನಗಳು ಜಾರಿ ಬಿದ್ದು ಅನೇಕ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು 
ಮುಲ್ಕಿ ನಗರ ಪಂಚಾಯತ್ ಮಾಜೀ ಸದಸ್ಯ ಭೀಮಾಶಂಕರ್ ಮಾತನಾಡಿ ಮುಲ್ಕಿ ನಗರ ಹಾಗೂ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡಿನಲ್ಲಿ ಬೆಳ್ಳಂಬೆಳಗ್ಗೆ ಅಕ್ರಮವಾಗಿ ಮದ್ಯ ಮಾರಾಟ ರಾಜಾ ರೋಷವಾಗಿ ನಡೆಯುತ್ತಿದೆ ಈ ಬಗ್ಗೆ ಅನೇಕ ಬಾರಿ ಮುಲ್ಕಿ ಪೊಲೀಸ್ ಠಾಣೆ ಹಾಗೂ ಅಬಕಾರಿ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇದಕ್ಕೆ ಉತ್ತರವಾಗಿ ಅಬಕಾರಿ ಇಲಾಖೆಯ ಅಧಿಕಾರಿ ಮಾತನಾಡಿ ನಾವು ಕಾರ್ಯಾಚರಣೆ ನಡೆಸುತ್ತೇವೆ ಆರೋಪಿಗಳನ್ನು ಹಿಡಿದರೆ ಬಿಡಿಸಲು ನಿಮ್ಮ ನಾಯಕರೇ ಲಾಬಿ ನಡೆಸುತ್ತಾರೆ ಎಂದಾಗ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆಗ ತಹಶಿಲ್ದಾರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು 
ಭೀಮಾಶಂಕರ್ ಮಾತನಾಡಿ ಹಿಂದುಳಿದ ವರ್ಗದ ನಾಗರಿಕರು ವಾಸಿಸುತ್ತಿರುವ ಮುಲ್ಕಿ ನಗರ ಪಂಚಾಯತಿ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿಯ  ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದುಹೋಗಿದೆ, ರಸ್ತೆ ಅವ್ಯವಸ್ಥೆ, ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ, ಕುಡಿಯುವ ನೀರಿನ "ಸಂಪ್" ಸ್ವಚ್ಛತೆ ಮಾಡುತ್ತಿಲ್ಲ ರೋಗದ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಅನೇಕ ಬಾರಿ ಮುಲ್ಕಿ ನಗರ ಪಂಚಾಯಿತಿಗೆ ದೂರು ನೀಡಿದ್ದರೂ ಇದುವರೆಗೂ ಸರಿಯಾಗಿಲ್ಲ ಎಂದರು. 
ಎಸ್ಸಿ ಎಸ್ಟಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಅವರು ಆಗ್ರಹಿಸಿದರು
ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಆರ್‌ಕೆ ಮಾತನಾಡಿ
ಪ್ರತಿ ಬಾರಿ ಸಭೆಯಲ್ಲಿ ಭರವಸೆಗಳು ಮಾತ್ರ ನೀಡುತ್ತಾರೆ ವಿನಹ ಸಮಸ್ಯೆ ಸರಿಪಡಿಸಿ ಕಾರ್ಯರೂಪಕ್ಕೆ ಬರುವುದಿಲ್ಲ, ಮುಂದಿನ ದಿನಗಳಲ್ಲಿ ಸರಿಯಾಗದಿದ್ದರೆ ಸಾಮೂಹಿಕವಾಗಿ ಸಭೆ ಬಹಿಷ್ಕರಿಸುತ್ತೇವೆ,ತಾಲೂಕು ವಾರು ಎಸ್ಸಿ ಎಸ್ಟಿ ಸಭೆಗೆ  ತಾಲೂಕು ವ್ಯಾಪ್ತಿಯ ಪ್ರತಿ ಅಧಿಕಾರಿಗಳು ಬರಬೇಕು, ಸಮಸ್ಯೆ ಗೊತ್ತಿಲ್ಲದ ಅಧಿಕಾರಿಗಳು ಬಂದರೆ ಸಭೆ ಕಾಟಾಚಾರಕ್ಕೆ ನಡೆಯುತ್ತದೆ ಎಂದು ಹೇಳಿದರು 
ಇದಕ್ಕೆ ಮುಲ್ಕಿ ತಾಲೂಕು ತಹಶಿಲ್ದಾರ್ ಪೃಥ್ವೀ ಸಾನಿಕಂ ಧ್ವನಿಗೂಡಿಸಿ ಮುಂದಿನ ಸಭೆಗೆ ತಾಲೂಕು ವ್ಯಾಪ್ತಿಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲು ಸೂಚನೆ ನೀಡಿದರು 
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಲ್ಲಿ ಸೌಜನ್ಯತೆಯಿಂದ ವರ್ತಿಸುವುದಿಲ್ಲ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂಬ ಸುರೇಶ್ ಸುರೇಶ್ ಬೆಳ್ಳಾಯರು ರವರ ದೂರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶಿಲ್ದಾರ್ ಸಭೆಯಲ್ಲಿ ತಿಳಿಸಿದರು 
ಸಭೆಯಲ್ಲಿ ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೆ ಹೋಂಡಮಯವಾಗಿ ಅವ್ಯವಸ್ಥೆಯಿಂದ ಕೂಡಿದ್ದು  ಲೋಕೋಪಯೋಗಿ ಇಲಾಖೆಯ ನಿರ್ಲಕ್ಷದ ಬಗ್ಗೆ ಮಂಜುನಾಥ್  ಆರ್ ಕೆ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ದುರಸ್ತಿ ಪಡಿಸಬೇಕು ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದರು. 
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಉಪತಹಶಿಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆಯ ಮೋಹನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದು ಪ್ರಶ್ನೆಗಳಿಗೆ ಉತ್ತರಿಸಿದರು 
ಸಮಾಜ ಕಲ್ಯಾಣ ಇಲಾಖೆಯ ಮಂಗಳೂರು  ಕಚೇರಿಯ ಅಧೀಕ್ಷಕಿ ಜಯಶ್ರೀ ಸ್ವಾಗತಿಸಿ ನಿರೂಪಿಸಿದರು.