Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿಲ್ಪಾಡಿ:ಗ್ರಾಮೀಣ ಭಾಗದ ಜನತೆಗೆ ಸ್ಪಂದಿಸುವ ಮೂಲಕ ನಿಷ್ಠಾವಂತ ಅಭಿವೃದ್ಧಿ ಅಧಿಕಾರಿಯಾಗಿ ಸಾಧನೆ -ರಾಮಕೃಷ್ಣ ಐತಾಳ್

ಮುಲ್ಕಿ: ಸರಕಾರಿ ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ನಿಷ್ಠೆ ಇದ್ದರೆ ಮಾತ್ರ ಜನ ಗುರುತಿಸುತ್ತಾರೆ ಎಂದು ಕಿಲ್ಪಾಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ರಾಮಕೃಷ್ಣ ಐತಾಳ್ ಹೇಳಿದರು 
ಅವರು ಕಿಲ್ಪಾಡಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಬಂಟ್ವಾಳ ತಾಲೂಕಿನ ಆರಳ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿರುವ ಪೂರ್ಣಿಮಾ ರವರನ್ನು ಪಂಚಾಯತ್ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಗ್ರಾಮೀಣ ಭಾಗದ ಜನತೆಗೆ ಸ್ಪಂದಿಸುವ ಮೂಲಕ ನಿಷ್ಠಾವಂತ ಅಭಿವೃದ್ಧಿ ಅಧಿಕಾರಿಯಾಗಿ ಬಹಳಷ್ಟು ಕಾರ್ಯಸಾಧನೆ ಮಾಡಿದ್ದಾರೆ. ಅವರ ಮುಂದಿನ ಜೀವನ ಯಶಸ್ವಿಯಾಗಲಿ ಎಂದರು
ಮುಖ್ಯ ಅತಿಥಿಯಾಗಿ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ಮಾತನಾಡಿ  ಗ್ರಾಮದ ಸ್ವಚ್ಛತೆ ಮತ್ತು  ಅಭಿವೃದ್ಧಿಯಲ್ಲಿ  ಪಿಡಿಒ ಗಳ ಪಾತ್ರ ಮಹತ್ವದ್ದು ಇದಕ್ಕೆ ಸರಿಸಾಟಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಎಂದರು
ವೇದಿಕೆಯಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ವಿಕಾಸ್ ಶೆಟ್ಟಿ,ಲೀಲಾ,ಮಾಜೀ ಸದಸ್ಯರಾದ ಗೋಪಿನಾಥ ಪಡಂಗ, ಮಮತಾ ಶೆಟ್ಟಿ, ದಿನೇಶ್, ರಾಜೇಶ್, ಲಲಿತಾ ಯಾದವ್, ಶಾಂತ, ಪಂಚಾಯತ್ ಕಾರ್ಯದರ್ಶಿ ಹರಿಶ್ಚಂದ್ರ, ಸಬಿತಾ ಶೆಟ್ಟಿ,
ಸುರೇಶ್ ಕೊಲಕಾಡಿ, ತಾರಾನಾಥ, ರಮೇಶ್, ಯತೀಶ್ ಕೊಲಕಾಡಿ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು 
ಕಾರ್ಯಕ್ರಮದಲ್ಲಿ ವರ್ಗಾವಣೆಯಾಗುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ರವರನ್ನು ಗೌರವಪೂರ್ವಕ ಬೀಳ್ಕೊಡುಗೆ ಸಮಾರಂಭ ನಡೆಯಿತು