Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದು ಗೂಡ್ಸ್ ಕಂಟೇನರ್ ಚಾಲಕ ಸಮೇತ ಪರಾರಿ

ಮುಲ್ಕಿ: ಕೇಂದ್ರ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ನಿಯಂತ್ರಣಕ್ಕೆ ಅಳವಡಿಸಿದ್ದ ಗಟ್ಟಿಮುಟ್ಟಾದ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದು ಗೂಡ್ಸ್ ಕಂಟೇನರ್ ಚಾಲಕ ಸಮೇತ ಪರಾರಿಯಾದ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ 
ಕೇರಳದಿಂದ ಗೋವಾ ಕಡೆಗೆ ಹೋಗುತ್ತಿದ್ದ ಬೃಹತ್ ಗಾತ್ರದ ಕಂಟೇನರ್ ಬುಧವಾರ ಮಧ್ಯರಾತ್ರಿ 12ರ ಸುಮಾರಿಗೆ ಮುಲ್ಕಿ ಬಸ್ ನಿಲ್ದಾಣ ತಲುಪುತ್ತಿದ್ದಂತೆ ಅದರ ಚಾಲಕನ ನಿಯಂತ್ರಣ ತಪ್ಪಿ ಗಟ್ಟಿ ಮುಟ್ಟಾದ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದೆ 
ಅಪಘಾತದ ರಭಸಕ್ಕೆ ಪೊಲೀಸ್ ಚೌಕಿ. ಕಿತ್ತು  ಹೋಗಿ ಹೆದ್ದಾರಿ ನಡುವೆ ಬಿದ್ದಿದೆ.
ಇತ್ತ ಅಪಘಾತ ನಡೆಸಿ ಚಾಲಕಿತನದಿಂದ ಕಂಟೇನರ್ ಚಾಲಕ ರಿವರ್ಸ್ ತೆಗೆದು ಸರ್ವಿಸ್ ರೋಡ್ ಮುಖಾಂತರ ಸ್ಥಳದಿಂದ ಕಂಟೈನರ್ ಸಮೇತ  ಪರಾರಿಯಾಗಿದ್ದಾನೆ. 
ಬೆಳಗಿನ ಜಾವ ಮೂರು ಗಂಟೆವರೆಗೆ ಹೆದ್ದಾರಿ ನಡುವಿನಲ್ಲಿ ಬೃಹತ್ ಗಾತ್ರದ ಪೊಲೀಸ್ ಚೌಕಿ ಬಿದ್ದುಕೊಂಡಿದ್ದು, ದಾರಿದೀಪದ ಅವ್ಯವಸ್ಥೆಯಿಂದ ಯಾರ ಗಮನಕ್ಕೂ ಬಂದಿರಲಿಲ್ಲ
ಎನ್ನಲಾಗಿದೆ
ಆದರೆ ಬೆಳಗಿನ ಜಾವ 3 ಗಂಟೆ  ಸುಮಾರಿಗೆ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ  ಅತೀ ವೇಗದಿಂದ ಬಂದ ಕಾರ್ ಚಾಲಕ ಪೊಲೀಸ್ ಚೌಕಿ ಗಮನಿಸಿ ಏಕಾಏಕಿ ಬ್ರೇಕ್ ಹಾಕಿದ್ದು ಬಾರಿ ಶಬ್ದ ಉಂಟಾಗಿದೆ. ಆಗ ಸ್ಥಳಕ್ಕೆ ಆಟೋ ಚಾಲಕ ಸಾಮಾಜಿಕ ಕಾರ್ಯಕರ್ತ ವಿಲ್ಪಿ ಮತ್ತಿತರರು ಧಾವಿಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ 
ಕೂಡಲೇ ಅವರು ಮುಲ್ಕಿ ಪೊಲೀಸ್ ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಪೊಲೀಸ್ ಚೌಕಿಗೆ  ಕಂಟೇನರ್ ಡಿಕ್ಕಿ ಹೊಡೆದು ಪರಾರಿಯಾದ ಬಗ್ಗೆ ಕಂಡು ಬಂದಿದೆ. ಆದರೆ ಕಂಟೇನರ್ ನ ನಂಬರ್ ಪ್ಲೇಟ್ ಸಿಗದ ಕಾರಣ  ಪರಿಶೀಲಿಸಲು ಹೆಜಮಾಡಿ ಟೋಲ್ ಸಿಬ್ಬಂದಿ ಸಂಪರ್ಕಿಸಿ ಕಂಟೈನರ್ ಬಗ್ಗೆ ಮಾಹಿತಿ ಪಡೆದಾಗ ಆತ ಕಾರವಾರದಲ್ಲಿರುವ ಬಗ್ಗೆ ಎಂದು ತಿಳಿದು ಬಂದಿದ್ದು ವಾಪಸ್ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಬಳಿಕ ಟೋಲ್ ಸಿಬ್ಬಂದಿಗಳು ಕ್ರೇನ್ ಮೂಲಕ ಪೊಲೀಸ್ ಚೌಕಿಯನ್ನು ಹೆದ್ದಾರಿಯಿಂದ ತೆರವುಗೊಳಿಸಿದ್ದಾರೆ