Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ಮುಲ್ಕಿ: ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ತಾಂಬೂಲ ಪ್ರಶ್ನೆ

ಮುಲ್ಕಿ:ಸೀಮೆಯ ಒಂಬತ್ತು ಮಾಗಣೆಯ ಪ್ರಸಿದ್ಧ ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ತಾಂಬೂಲ ಪ್ರಶ್ನೆ ಕಾರ್ಯಕ್ರಮ ಗುರುವಾರ ಕ್ಷೇತ್ರದಲ್ಲಿ ನಡೆಯಿತು 
ಜ್ಯೋತಿಷಿ ಶ್ರೀನಿವಾಸ ತಂತ್ರಿ ಕೊರಂಗ್ರಪಾಡಿ ಕಾಪು ಹಾಗೂ ಮಾಧವ ಭಟ್ ಧೂಪದಕಟ್ಟೆ  ಹಾಗೂ ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ದೇoದಡ್ಕ ರವರ ಉಪಸ್ಥಿತಿಯಲ್ಲಿ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಯಿತು 
ಪ್ರಶ್ನೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ  ಚರ್ಚೆ ನಡೆಯಿತು 
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ 
ದೆಪ್ಪುಣಿಗುತ್ತು  ಸುಧಾಕರ ಶೆಟ್ಟಿ  ಗುತ್ತಿನಾರ್  ಹಾಗೂ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವ ಮುಂದಿನ ವರ್ಷ  ಮಾರ್ಚ್ 12ರಂದು ನಡೆಯಲಿದೆ