Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಂಡೊ ಪಿರ್ಸತ್ತೊ ಭಾರತ” ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ

ಮುಲ್ಕಿ: ಮುಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ತು ಇದರ ವತಿಯಿಂದ ಅಟ್ಲಾಸ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸುರತ್ಕಲ್ ಇದರ ಸಹಯೋಗದಲ್ಲಿ 80ನೇ ಸ್ವಾತಂತ್ತ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ “ನಂಡೊ ಪಿರ್ಸತ್ತೊ ಭಾರತ” ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಪರಿಷತ್ ಅಧ್ಯಕ್ಷರಾದ ನಿಸಾರ್ ಅಹ್ಮದ್ ಅಂಗರಗುಡ್ಡೆ ಅವರು ಗುರುವಾರ ಪ್ರಕಟಿಸಿದರು.

ಪ್ರಥಮ ಬಹುಮಾನವನ್ನು ಖತೀಜ ನಿಮ್ರ, ಸೈಯ್ಯದ್ ಹಾಜಿ ಕಾಂಪೌಂಡ್, ಕರ್ನಿರೆ, ಮುಲ್ಕಿ,  ದ್ವಿತೀಯ ಬಹುಮಾನವನ್ನು ಮುಹಮ್ಮದ್ ಆಫ್ರಾಝ್ ದಾರುನ್ನೂರ್ ಕಾಶಿಪಟ್ನ ಮೂಡಬಿದ್ರೆ ಹಾಗೂ ತೃತೀಯ ಬಹುಮಾನವನ್ನು ಸಾನಿಯಾ 8ನೇ ವಿಭಾಗ, ಚೊಕ್ಕಬೆಟ್ಟು, ಸುರತ್ಕಲ್ ಪಡೆದುಕೊಂಡಿದ್ದಾರೆ.

ಆ.15ರಂದು ಅಟ್ಲಾಸ್ ಗೋಲ್ಡ್ ಆ್ಯಂಡ್ ಡೈಮಂಡ್ ಸುರತ್ಕಲ್ ಇಲ್ಲಿ ಸಂಜೆ 4ಗಂಟೆಗೆ ಸರಳ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ವಿಜೇತರಾದವರಿಗೆ ಪ್ರಶಸ್ತಿ ಫಲಕ, ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರನೀಡಿ ಗೌರವಿಸಲಾಗುವುದು ಎಂದು ಮುಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ನಿಸಾರ್ ಅಹ್ಮದ್ ಅಂಗರಗುಡ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.