ಸಂಘಟನೆ ಮತ್ತು ಶಿಕ್ಷಣಕ್ಕೆ ಉತ್ತಮ ಸಹಕಾರ ನೀಡುವ ಕಾರ್ಯ ಅಭಿನಂದನೀಯ -ಧನರಾಜ್ ಎನ್. ಮೂಲ್ಕಿ
ಮೂಲ್ಕಿ: ಸಂಘಟನೆ ಮತ್ತು ಶಿಕ್ಷಣಕ್ಕೆ ಉತ್ತಮ ಸಹಕಾರ ನೀಡುವ ಮೂಲಕ ನಾರಾಯಣ ಗುರುಗಳ ತತ್ವ ಪಸರಿಸುವ ಮೂಲ್ಕಿ ಸಂಘದ ಕಾರ್ಯ ಅಭಿನಂದನೀಯ ಎಂದು ಅಖಿಲಭಾರತ ರೆಸೋರ್ಟ್ ಡೆವಲಪ್‌ಮೆಂಟ್ ಅಸೋಶಿಯೇಶನ್ ಸಲಹೇದಾರ ಧನರಾಜ್ ಎನ್. ಮೂಲ್ಕಿ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಗುರುಜಯಂತಿಯ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುಜಯಂತಿ ವಿಶೇಷ ಉಪನ್ಯಾಸ ನೀಡಿದ ವಕೀಲೆ ಸಮೀಕ್ಷಾ ಭಾಸ್ಕರ ಹೆಗ್ಡೆ ಮಾತನಾಡಿ, ಮಾನವರಲ್ಲಿ ತಾರತಮ್ಯ ಧೋರಣೆಯನ್ನು ನಿವಾರಿಸಿ ಹಿಂದುಳಿದವರನ್ನು ಸಂಘಟಿಸಿ ವಿದ್ಯೆಯ ಮೂಲ ಸಭಲ ಗೊಳಿಸಿದ ನಾರಾಯಣ ಗುರುಗಳು ವಿಶ್ವಮಾನ್ಯರಾಗಿದ್ದು ಅವರ ತತ್ವ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ ಎಂದರು.
ಈ ಸಂದರ್ಭ ಹಿರಿಯ ಲೆಕ್ಕ ಪರಿಶೋಧಕ ರಾಘವೇಂದ್ರ ಮೊಗೆರಾಯ ಹಾಗೂ. ಶ್ರೀ ಗುರುಜಯಂತಿ ಮೆರವಣಿಗೆಯನ್ನು ಪ್ರಾಯೋಜಿಸಿದ ಕೊಲಕಾಡಿ ಬರ್ಕೆ ಧರ್ಮಚಾವಡಿಯ ಪರವಾಗಿ ಸುಶೀಲ್ ಪೂಜಾರಿ ಯವರನ್ನು ಮತ್ತು
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದಿ.ಎನ್.ಆರ್.ಮೂಲ್ಕಿ ದತ್ತಿ ನಿಧಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ವಹಿಸಿದ್ದರು.
ದಂತವೈದ್ಯ ಚಂದ್ರಶೇಖರ್ ಬಲೆಪು ವಿದ್ಯಾರ್ಥಿ ವೇತನ ವಿತರಿಸಿದರು.
ಅತಿಥಿಗಳಾಗಿ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಗೋಪೀನಾಥ ಪಡಂಗ, ಕಾರ್ಯದರ್ಶಿ ಜಯಕುಮಾರ್ ಕುಬೆವೂರು, ಕೋಶಾಧಿಕಾರಿ ಚಂದ್ರಶೇಖರ್, ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಯದೀಶ್ ಅಮೀನ್, ಸೇವಾದಳದ ಅಧ್ಯಕ್ಷ ಶಶಿಕಾಂತ್, ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಉಪಸ್ಥಿತರಿದ್ದರು. ವಾಮನ ಕೋಟ್ಯಾನ್ ನಡಿಕುದ್ರು ಸ್ವಾಗತಿಸಿದರು, ಗೋಪೀನಾಥ ಪಡಂಗ ಪ್ರಸ್ತಾವಿಸಿದರು, ಜಯಕುಮಾರ್ ಕುಬೆವೂರು ಧನ್ಯವಾದ ಅರ್ಪಿಸಿದರು
(ಚಿತ್ರ ಇದೆ -ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಗುರುಜಯಂತಿಯ ಪ್ರಯುಕ್ತ ಶೇ೯೫% ಅಧಿಕ ಅಂಕ ಗಳಿಸಿದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.)