Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅಂಗಾರಗುಡ್ಡೆ ಬದ್ರಿಯಾ ದಫ್ ಕಮಿಟಿ ನೂತನ ಅಧ್ಯಕ್ಷರಾಗಿ ತನ್ವೀರ್ ಆಯ್ಕೆ

ಮುಲ್ಕಿ: ಅಂಗಾರಗುಡ್ಡೆ ಬದ್ರಿಯಾ ದಫ್ ಕಮಿಟಿ  ಇದರ 2026ನೇ ಸಾಲಿನ ವಾರ್ಷಿಕ ಮಹಾ ಸಭೆಯು ರವಿವಾರ ದಫ್ ಕಮಿಟಿಯ ಸಭಾಂಗಣದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ನವಾಝ್ ಅವರ‌ ಅಧ್ಯಕ್ಷತೆಯಲ್ಲಿ ಜರುಗಿತು. 

ಈ ವೇಳೆ 2026-27ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ತನ್ವೀರ್, ಪ್ರಧಾನ ಕಾರ್ಯದರ್ಶಿಯಾಗಿ ಶಾಹಿಲ್ ಎಂ.ಎಚ್. ಆಯ್ಕೆಯಾದರು.‌

ಉಪಾಧ್ಯಕ್ಷರಾಗಿ ಮುಬಾರಕ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಹಫೀಝ್, ಖಜಾಂಚಿಯಾಗಿ ಮುಹಮ್ಮದ್ ಯಾಸೀರ್ ಸರ್ವಾನುಮತದಿಂದ ಆಯ್ಕೆಯಾದರು ಎಂದು ಅಂಗಾರಗುಡ್ಡೆ ಬದ್ರಿಯಾ ದಫ್ ಕಮಿಟಿಯ ಪ್ರಕಟನೆ ತಿಳಿಸಿದೆ.‌